ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸೋಮವಾರ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಜರುಗಿತು.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಸೋಮವಾರ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಜರುಗಿತು.
Published on
ಬೆಳಗಾವಿ: ಮಕ್ಕಳ ಶರೀರ ಹೂವಿನಷ್ಟೇ ಮೃದುತ್ವ ಹೊಂದಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೆಎಲ್‌ಇ ಶತಮಾನೊತ್ಸವ ಚಾರಿಟಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ಹಿರಿಯ ವೈದ್ಯ ಡಾ. ಸಂತೋಷಕುಮಾರ ಕರಮಸಿ ಹೇಳಿದರು.
ತಾಲೂಕಿನ ತಾರಿಹಾಳ ಗ್ರಾಮದ ಅಡವಿ ಸಿದ್ಧೇಶ್ವರ ಮಠದಲ್ಲಿ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯು ಜನಸೇವಾ ಫೌಂಡೇಶನ್ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರ ಅವರು, ಶೀತಗಾಳಿಯಿಂದ ಮಕ್ಕಳಿಗೆ ನೆಗಡಿ ಕೆಮ್ಮುಗಳು ಬರಬಹುದು. ಇವುಗಳ ಬಗ್ಗೆ ಅಲಕ್ಷಿಸದೇ ವೈದ್ಯರಿಗೆ ತೋರಿಸಿ ತಕ್ಕ ಉಪಚಾರ ಹೊಂದುವುದು ಅಗತ್ಯ ಎಂದು ಸಲಹೆ ನೀಡಿದರು.
ಜನ ಸೇವಾ ಫೌಂಡೇಶನ್ ಅಧ್ಯಕ್ಷ ಅಡಿವೆಪ್ಪ ರಾಜಗೋಳಿ ಮಾತನಾಡಿ, ಆರೋಗ್ಯ ಸೇವೆಗಳು ನಗರ ಪ್ರದೇಶಕ್ಕೆ ಸೀಮಿತವಾಗದೇ ಹಳ್ಳಿ ಹಳ್ಳಿಗೂ ತಲುಪಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಕೆಎಲ್‌ಇ ಸಂಸ್ಥೆಯ ಚಾರಿಟಬಲ್ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ನಮ್ಮೂರಿನ ನಾಗರಿಕರಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿರುವುದಕ್ಕೆ ಗ್ರಾಮಸ್ಥರ ವತಿಯಿಂದ ಅಭಿನಂದನೆ ತಿಳಿಸುವುದಾಗಿ ಹೇಳಿದರು.
ಶಿಬಿರದಲ್ಲಿ ಸುಮಾರು 125 ಜನರ ಆರೋಗ್ಯ ತಪಾಸಿಸಲಾಯಿತು. 42 ಜನರಿಗೆ ಜನರಲ್ ಮೆಡಿಸಿನ ವಿಭಾಗದ ಡಾ.ದಿಶಾ ಭಾಕರ ತಪಾಸಿಸಿ, ಅದರಲ್ಲಿ 10 ಜನರಿಗೆ ರಕ್ತದೊತ್ತಡ ಹಾಗೂ ಮಧುಮೇಹದ ಸಮಸ್ಯೆಗಳಿರುವುದು ತಿಳಿದು ಬಂತು. ಎಲುಬು ಕೀಲು ವೈದ್ಯ ಡಾ.ಸಿ.ವಿ.ಶೆಟ್ಟರ 30 ಜನರಿಗೆ ತಪಾಸಿಸಿದಾಗ, 7 ಜನರಿಗೆ ಸಂಧಿವಾತ ಹಾಗೂ ಮತ್ತಿತರೆ ಎಲುಬು ಕೀಲು ಸಮಸ್ಯೆಗಳಿರುವುದು ಕಂಡು ಬಂತು. 28 ಜನ ಮಕ್ಕಳನ್ನು ಡಾ.ಸಂತೋಷಕುಮಾರ ಕರಮಸಿ ತಪಾಸಿಸಿದರು. ನೇತ್ರ ವೈದ್ಯೆ ಡಾ.ಸ್ಫೂರ್ತಿ ಮೊರಪ್ಪನವರ 36 ಜನರಿಗೆ ತಪಾಸಿಸಿದರು.
ತಪಾಸಣೆಗೊಳಪಟ್ಟ ಎಲ್ಲರಿಗೂ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಹಾಗೂ ಮುಖ್ಯ ಕಾರ್ವನಿರ್ವಹನಾಧಿಕಾರಿ ಪ್ರಶಾಂತ ದೇಸಾಯಿ ಆಸ್ಪತ್ರೆಯ ಲಭ್ಯವಿರುವ ಕಡಿಮೆ ದರದ ಸೇವೆಗಳನ್ನು ಉಪಯೋಗಿಸಿಕೊಳ್ಳಿ ಎಂದು ತಿಳಿಸಿದರು.
ಸಂತೋಷ ಇತಾಪೆ, ಸಾಗರ ಅಕನೋಜಿ, ಗಿರಿಶ ಇಟಗಿ ಹಾಗೂ ವೈದ್ಯಕೀಯ ಸಿಬ್ಬಂದಿ, ತಾರಿಹಾಳ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net