22 ಲಕ್ಷ ರೂ.ವೆಚ್ಚದಲ್ಲಿ ಬಸವೇಶ್ವರ ಪ್ರತಿಮೆ

ಬೈಲಹೊಂಗಲ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಶ್ವಾರೂಢ ಬಸವೇಶ್ವರ ಕಂಚಿನ ಪ್ರತಿಮೆಯನ್ನು ಕೊಲ್ಲಾಪುರದಲ್ಲಿ ಬೈಲಹೊಂಗಲ ನಿಯೋಗ ವೀಕ್ಷಿಸಿತು. ಪ್ರಭುನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಡಾ.ಎ.ಎನ್.ಬಾಳಿ ಇತರರಿದ್ದರು.
ಬೈಲಹೊಂಗಲ ನಗರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಶ್ವಾರೂಢ ಬಸವೇಶ್ವರ ಕಂಚಿನ ಪ್ರತಿಮೆಯನ್ನು ಕೊಲ್ಲಾಪುರದಲ್ಲಿ ಬೈಲಹೊಂಗಲ ನಿಯೋಗ ವೀಕ್ಷಿಸಿತು. ಪ್ರಭುನೀಲಕಂಠ ಸ್ವಾಮೀಜಿ, ಶಾಸಕ ಮಹಾಂತೇಶ ಕೌಜಲಗಿ, ಡಾ.ಎ.ಎನ್.ಬಾಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೊಲ್ಲಾಪುರಕ್ಕೆ ತೆರಳಿ ನಿಯೋಗ ವೀಕ್ಷಣೆ
  • ಶೇ.60ರಷ್ಟು ಕಾರ್ಯ ಪೂರ್ಣ
ಬೈಲಹೊಂಗಲ: ನಗರದ ಮಿನಿ ವಿಧಾನಸೌಧ ಪಕ್ಕದ ಈಜುಕೊಳದ ಬಳಿ ಶ್ರೀ ಬಸವೇಶ್ವರ ಉದ್ಯಾನದಲ್ಲಿ ಪ್ರತಿಷ್ಠಾಪಿಸಲು ಯೋಜಿಸಿರುವ ಸುಮಾರು 22 ಲಕ್ಷ ರೂ. ವೆಚ್ಚದ ಅಶ್ವಾರೂಢ ಬಸವೇಶ್ವರ ಕಂಚಿನ ಪ್ರತಿಮೆಯನ್ನು ಶಾಸಕ ಮಹಾಂತೇಶ ಕೌಜಲಗಿ ಹಾಗೂ ಶಾಖಾ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ನೇತೃತ್ವದ ನಿಯೋಗ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಭೇಟಿ ನೀಡಿ ಸೋಮವಾರ ಪರಿಶೀಲಿಸಿತು.
ಪ್ರತಿಮೆ ಕೆಲಸ ಈಗಾಗಲೇ ಶೇ.60ರಷ್ಟು ಪೂರ್ಣಗೊಂಡಿದ್ದು, ಬಸವಣ್ಣನವರ ವ್ಯಕ್ತಿತ್ವಕ್ಕೆ ಅನುಗುಣವಾಗಿ ಅಂತಿಮ ರೂಪ ನೀಡುವ ಕುರಿತು ನಿಯೋಗ ಶಿಲ್ಪಿಗೆ ಅಗತ್ಯ ಸಲಹೆ ನೀಡಿತು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಬೈಲಹೊಂಗಲದ ಹೆಮ್ಮೆಯ ಸಂಕೇತವಾಗುವಂತೆ ಅಶ್ವಾರೂಢ ಬಸವೇಶ್ವರರ ಪ್ರತಿಮೆಯನ್ನು ಸುಂದರವಾಗಿ ಹಾಗೂ ಕಲಾತ್ಮಕವಾಗಿ ನಿರ್ಮಿಸಲಾಗುತ್ತಿದೆ. ಆಧುನಿಕ ವಿನ್ಯಾಸದೊಂದಿಗೆ ಉದ್ಯಾನ ಅಭಿವೃದ್ಧಿಪಡಿಸುವ ಜತೆಗೆ ಬಸವಣ್ಣನವರ ವಚನ, ಸಂದೇಶ ಪರಿಚಯಿಸುವ ವಚನ ಭಂಡಾರ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಲಿಂಗಾಯತ-ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಡಾ.ಎ.ಎನ್.ಬಾಳಿ, ಜಾಗತಿಕ ಲಿಂಗಾಯತ ಮಹಾಸಭಾದ ನಗರ ಘಟಕದ ಅಧ್ಯಕ್ಷ ಮಹೇಶ ಕೋಟಗಿ, ರಾಷ್ಟ್ರೀಯ ಬಸವದಳದ ಪ್ರಧಾನ ಕಾರ್ಯದರ್ಶಿ ವೀರೇಶ ಹಲಕಿ, ಚಿತ್ರನಟ ಶಿವರಂಜನ ಬೋಳನ್ನವರ, ಮುಖಂಡ ಮಹೇಶ ಬೆಲ್ಲದ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net