ಸೋಮವಾರ ಬಸವೇಶ್ವರ ಜಾತ್ರಾ ಮಹೋತ್ಸವ

ಘಟನಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಬಸವರಾಜ ಗಲಗಲಿ, ಶಿವಪಾದ ಅವಟಿ, ಹನುಮಂತ ಗಲಗಲಿ, ಸುರೇಶ ಪೂಜಾರಿ, ದುಂಡಪ್ಪ ಗಲಗಲಿ, ನಿಂಗಪ್ಪ ಹೊಸಗೌಡರ ಇತರರಿದ್ದರು.
ಘಟನಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಬಸವರಾಜ ಗಲಗಲಿ, ಶಿವಪಾದ ಅವಟಿ, ಹನುಮಂತ ಗಲಗಲಿ, ಸುರೇಶ ಪೂಜಾರಿ, ದುಂಡಪ್ಪ ಗಲಗಲಿ, ನಿಂಗಪ್ಪ ಹೊಸಗೌಡರ ಇತರರಿದ್ದರು.
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಆ.31ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೊಂದಿಗೆ ಜರುಗಲಿದೆ ಎಂದು ಮುಖಂಡ ಬಸವರಾಜ ಗಲಗಲಿ ಹೇಳಿದರು.

ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಮಂಗಳವಾರ ಬಸವೇಶ್ವರ ಜಾತ್ರೆ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಆ.31ರಂದು ಬೆಳಗ್ಗೆ ಪಲ್ಲಕ್ಕಿ ಉತ್ಸವ, ನಂದಿಕೋಲು, ವಾದ್ಯಮೇಳಗಳೊಂದಿಗೆ ಗಂಗಾಸ್ನಾನಕ್ಕೆ ಕೃಷ್ಣಾ ನದಿಗೆ ತೆರಳುವುದು. ಚೀಲ ಹೊತ್ತೊಯ್ಯುವ, ವಚನ ಗಾಯನ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಲಿವೆ. ಮಧ್ಯಾಹ್ನ ಅನ್ನಪ್ರಸಾದವಿದೆ ಎಂದರು.
ಶಿವಪಾದ ಅವಟಿ, ಹನುಮಂತ ಗಲಗಲಿ, ಸುರೇಶ ಪೂಜಾರಿ, ದುಂಡಪ್ಪ ಗಲಗಲಿ, ನಿಂಗಪ್ಪ ಹೊಸಗೌಡರ, ವಿಜಯ ಗಲಗಲಿ, ಬಾಲಯ್ಯ ಮಠಪತಿ,
ಬಸಪ್ಪ ಗಲಗಲಿ, ಕುಮಾರ ಜಮಖಂಡಿ, ವೀರಯ್ಯ ಮಠಪತಿ, ರವಿ ಗಲಗಲಿ, ಬಸಪ್ಪ ಗಲಗಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net