ಬಳ್ಳಾರಿ ನಾಲಾ ಅಣೆಕಟ್ಟೆ ಕಾಮಗಾರಿ ಸ್ಥಗಿತ

ಬಳ್ಳಾರಿ ನಾಲಾ ಅಣೆಕಟ್ಟ್ಟೆ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.
ಬಳ್ಳಾರಿ ನಾಲಾ ಅಣೆಕಟ್ಟ್ಟೆ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತಗೊಂಡಿದೆ.
Published on
ಕೋ.ಶಿವಾಪುರ: ಬಳ್ಳಾರಿ ನಾಲಾಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿ ಬೆಳಗಾವಿ, ಗೋಕಾಕ, ಸವದತ್ತಿ ಹಾಗೂ ಬೈಲಹೊಂಗಲ ತಾಲೂಕಿನ 8,200 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುವ ಯೋಜನೆ ಸರ್ಕಾರದ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿದ್ದು ಕೃಷಿಕರ ಕನಸಿಗೆ ನೀರೆರಚಿದಂತಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಈ ಅಣೆಕಟ್ಟೆಯಿಂದ ಬೆಳಗಾವಿ ತಾಲೂಕಿನ 3 ಗ್ರಾಮ ಸಂಪೂರ್ಣ ಹಾಗೂ 7 ಗ್ರಾಮಗಳು ಭಾಗಶಃ ಮುಳುಗಡೆಯಾಗುತ್ತವೆ. ಕಳೆದ 10 ವರ್ಷಗಳಿಂದ ಹೂಳೆತ್ತದ ಪರಿಣಾಮ ನಾಲಾ ಮುಚ್ಚಿಹೋಗಿದೆ. ಮಳೆಗಾಲದಲ್ಲಿ ಜಮೀನುಗಳಿಗೆ ನೀರು ನುಗ್ಗಿ 12ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಾವಿರಾರು ಎಕರೆ ಬೆಳೆ ಹಾನಿಯಾಗುತ್ತಿದ್ದರೂ ಸರ್ಕಾರ ಹಾಗೂ ಜನಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕಾಮಗಾರಿಗೆ ವಿಶೇಷ ಅನುದಾನ ಬಿಡುಗಡೆಯಾಗಿತ್ತು. ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಹಿಂದಿನ ಸರ್ಕಾರ ಡ್ಯಾಂ ನಿರ್ಮಾಣಕ್ಕೆ 800 ಕೋಟಿ ರೂ. ಯೋಜನೆ ರೂಪಿಸಿತ್ತು. ಆದರೆ, ಯೋಜನೆ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಳ್ಳಾರಿ ನಾಲಾ ಯೋಜನೆ ಕಾಮಗಾರಿ ಕೂಡಲೇ ಪುನರಾರಂಭಿಸಬೇಕು. ನಾಲೆಯಲ್ಲಿ ಹೂಳೆತ್ತಲು ಕ್ರಮವಹಿಸಬೇಕೆಂದು ಆಗ್ರಹಿಸಿದ್ದಾರೆ.
ಯೋಜನೆಯ ಡಿಪಿಆರ್, ಪರಿಹಾರ ಪ್ಯಾಕೇಜ್ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮೊಹ್ಮಮದ್ ರೋಷನ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net