ಮಕ್ಕಳಿಗೆ ಪಾಠ ಮಾಡಿದ ಬಬಲೇಶ್ವರ

ಬೆಳಗಾವಿ ತಾಲೂಕಿನ ಮಚ್ಛೆ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಬುಧವಾರ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಕ್ಕಳಿಗೆ ಪಾಠ ಮಾಡಿದರು.
ಬೆಳಗಾವಿ ತಾಲೂಕಿನ ಮಚ್ಛೆ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಬುಧವಾರ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಕ್ಕಳಿಗೆ ಪಾಠ ಮಾಡಿದರು.
Published on
ಬೆಳಗಾವಿ: ಜಿಲ್ಲಾ ಪ್ರವಾಸದಲ್ಲಿದ್ದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಚ್ಚೆ ಪಟ್ಟಣದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಲಿ-ಕಲಿ ಮಕ್ಕಳಿಗೆ ಪಾಠ ಮಾಡಿದರು.
ಈ ವೇಳೆ ಬಬಲೇಶ್ವರ ಕೇಳಿದ ಪ್ರಶ್ನೆಗಳಿಗೆ ಮಕ್ಕಳು ಚುರುಕಾಗಿ ಉತ್ತರಿಸಿದರು. ನಂತರ ಹಾಡುಗಳನ್ನು ಹಾಡಿದ ಮಕ್ಕಳ ಉತ್ಸಾಹ ಪ್ರೀತಿ ಕಂಡು ಮಾತನಾಡಿದ ಅವರು, ಎಲ್ಲಿ ಮಕ್ಕಳಿರುತ್ತಾರೋ ಅಲ್ಲಿ ಸಂತೋಷ ಸದಾ ನೆಲೆಸಿರುತ್ತದೆ. ಅವರೇ ನಿಜವಾದ ಸಂತರು ಮತ್ತು ದೇವ ಸ್ವರೂಪರು ಎಂದರು.
ಮಕ್ಕಳಿಗೆ ಶುಚಿ ರುಚಿಯಾದ ಆಹಾರ ಪೂರೈಸಿದಂತೆ, ಶಾಲೆಯಲ್ಲಿ ಮಕ್ಕಳ ಸ್ನೇಹಿ ವಾತಾವರಣ ರೂಪಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಶಾಲೆಯ ಶಿಕ್ಷಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿದ್ದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net