ಆರೋಗ್ಯ ಕಾಪಾಡುವ ಆಯುರ್ವೇದ

ಚಿಂಚಣಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಕಿರಣಕುಮಾರ ಮುತ್ನಾಳಿ ಮಾತನಾಡಿದರು. ಮಹಾಂತೇಶ ಗುಡ್ನವರ, ನಿರ್ಮಲಾ ಕುಲಕರ್ಣಿ, ಎ.ಎಂ.ಡುಪ್ಪನಕರ, ಡಾ.ಸೂರಜ ಕುಂಬಾರ ಇತರರಿದ್ದರು.
ಚಿಂಚಣಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಡಾ.ಕಿರಣಕುಮಾರ ಮುತ್ನಾಳಿ ಮಾತನಾಡಿದರು. ಮಹಾಂತೇಶ ಗುಡ್ನವರ, ನಿರ್ಮಲಾ ಕುಲಕರ್ಣಿ, ಎ.ಎಂ.ಡುಪ್ಪನಕರ, ಡಾ.ಸೂರಜ ಕುಂಬಾರ ಇತರರಿದ್ದರು.
Published on

ಚಿಕ್ಕೋಡಿ: ಆಯುರ್ವೇದ ಕೇವಲ ರೋಗ ಬಂದ ನಂತರ ಚಿಕಿತ್ಸೆ ನೀಡುವ ಪದ್ಧತಿಯಲ್ಲ. ರೋಗ ಬಾರದಂತೆ ತಡೆಗಟ್ಟುವುದು, ಆರೋಗ್ಯ ಕಾಪಾಡುವುದು ಹಾಗೂ ವ್ಯಕ್ತಿಯ ಜೀವನಶೈಲಿ ಸಮತೋಲನಗೊಳಿಸುತ್ತದೆ ಎಂದು ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಪ್ರಾಂಶುಪಾಲ ಡಾ.ಕಿರಣಕುಮಾರ ಮುತ್ನಾಳಿ ಹೇಳಿದರು.

ತಾಲೂಕಿನ ಚಿಂಚಣಿಯ ಅಲ್ಲಮಪ್ರಭು ಮಠದಲ್ಲಿ ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಒಂದು ವಾರದ ಆಯುರ್ ಗ್ರಾಮ 3.0 ಇಂದ್ರಿಯ ಆರೋಗ್ಯ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮ ಆಯುರ್ವೇದ ಆರೋಗ್ಯ ಸಂದೇಶ ಮನೆ-ಮನೆಗೆ ತಲುಪಿಸಿ ಆರೋಗ್ಯ ಸಂರಕ್ಷಣಾ ತತ್ತ್ವ ಪಸರಿಸುವ ಕಾರ್ಯಕ್ರಮವಾಗಿದೆ ಎಂದರು.
ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮಹಾಂತೇಶ ಗುಡ್ನವರ, ಸಹಶಿಕ್ಷಕಿ ನಿರ್ಮಲಾ ಕುಲಕರ್ಣಿ, ಎ.ಎಂ.ಡುಪ್ಪನಕರ, ಉಪನ್ಯಾಸಕ ಡಾ.ಸೂರಜ ಕುಂಬಾರ, ಡಾ.ಕಾಂಚನಾ ಶರಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net