ರಾಣಿ ಚನ್ನಮ್ಮ ವಿವಿದಲ್ಲಿ ಜಾಗೃತಿ ಕಾರ್ಯಕ್ರಮ

ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ  ಹಣಕಾಸು ಅಧಿಕಾರಿ ಎನ್.ಎ.ಸಪ್ನಾ ಮಾತನಾಡಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿವಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಎನ್.ಎ.ಸಪ್ನಾ ಮಾತನಾಡಿದರು.
Published on
ಬೆಳಗಾವಿ: ಒಳ್ಳೆಯ ಹವ್ಯಾಸಗಳು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಎನ್.ಎ.ಸಪ್ನಾ ಹೇಳಿದರು.
ವಿವಿಯಲ್ಲಿ ಸಮಾಲೋಚನೆ ಮತ್ತು ಜಾಗೃತಿ ಕುರಿತು ಏರ್ಪಡಿಸಿದ್ದ ಎರಡು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲವರು ಅಡುಗೆ ಮಾಡುವ ಮೂಲಕ, ಇನ್ನು ಕೆಲವರು ಸಂಗೀತ, ನೃತ್ಯ, ತೋಟಗಾರಿಕೆ ಹೀಗೆ ತಮ್ಮ ಹವ್ಯಾಸಗಳ ಮೂಲಕ ಮಾನಸಿಕ ಒತ್ತಡದಿಂದ ಹೊರ ಬರುವ ಪ್ರಯತ್ನ ಮಾಡುತ್ತಾರೆ ಎಂದರು.
ಇಂಗ್ಲಿಷ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ವಿಜಯ ನಾಗಣ್ಣವರ ಮಾತನಾಡಿ, ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳಲ್ಲಿ ಹಿರಿಯರು, ಅಣ್ಣ, ಅಕ್ಕಂದಿರು ನೀಡುತ್ತಿದ್ದ ಮಾರ್ಗದರ್ಶನದಿಂದ ಮನೆ ಹೊರಗೆ ಹೋಗಿ ಸಲಹೆ ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಆದರೀಗ ಆಧುನಿಕತೆ, ಔದ್ಯೋಗಿಕ ಕ್ರಾಂತಿಯಿಂದಾಗಿ ಪ್ರತಿಯೊಬ್ಬರೂ ಒಂಟಿತನದಿಂದ ಬಳಲುತ್ತಿದಾರೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ಇಂಥ ಸಮಾಲೋಚನಾ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.
ಕಲಾ ವಿಭಾಗದ ಡೀನ್ ಪ್ರೊ.ಸಿ.ಎನ್.ವಾಘಮಾರೆ ಅಧ್ಯಕ್ಷತೆ ವಹಿಸಿದ್ದರು. ಪಿಎಂ ಉಷಾ ಮೇರುವಿನ ನೋಡಲ್ ಅಧಿಕಾರಿ ಡಾ.ನಂದಿನಿ ದೇವರಮನಿ ಸ್ವಾಗತಿಸಿದರು. ಪಿಎಂ ಉಷಾ ಸಾಪ್ಟ್ ಕಂಪೋನೆಂಟ್ 44ರ ಸಂಯೋಜನಾಧಿಕಾರಿ ಪ್ರೊ.ಕವಿತಾ ಕುಸುಗಲ್ಲ ವಂದಿಸಿದರು. ಅಂಬಿಕಾ ಕಾಂಬಳೆ ಶಿಶುನಾಳ ಶರೀಫರ ತತ್ವಪದ ಪ್ರಸ್ತುತಪಡಿಸಿದರು. ವಿನಾಯಕ ನಂದಿ ಪರಿಚಯಿಸಿದರು. ಗೋಪಿಕಾ ಕುಲಕರ್ಣಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net