ಮಿರಜ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತಂಬಾಕುರಹಿತ ದಿನದ ಜಾಗೃತಿ ರ‌್ಯಾಲಿಯಲ್ಲಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಿರ್ಮಲ ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.
Published on:
Copied
Follow Us
ಕಾಗವಾಡ:ಮಹಾರಾಷ್ಟ್ರದ ಮಿರಜನ ನಿರ್ಮಲ ಆಸ್ಪತ್ರೆ, ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಮೇ 30ರಂದು ವಿಶ್ವ ತಂಬಾಕುರಹಿತ ದಿನದ ಅಂಗವಾಗಿ ಶುಕ್ರವಾರ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮತ್ತು ತಂಬಾಕುಮುಕ್ತ ಸಮಾಜ ರಚಿಸಲು ಜಾಗೃತಿ ರ‌್ಯಾಲಿ ಜರುಗಿತು.
ಬೀದಿ ನಾಟಕ ಮತ್ತು ಪ್ರತಿಜ್ಞಾ ಬೋಧನೆಯೊಂದಿಗೆ ರ‌್ಯಾಲಿಗೆ ಚಾಲನೆ ನೀಡಲಾಯಿತು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ನಿರ್ಮಲ ಆಸ್ಪತ್ರೆ ಸಿಬ್ಬಂದಿ ಸೇರಿ ತಂಬಾಕು ಸೇವನೆಯಿಂದಾಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳ
ಕುರಿತು ಬೀದಿ ನಾಟಕ ಪ್ರದರ್ಶಿಸಿ, ಎಲ್ಲರೂ ತಂಬಾಕುಮುಕ್ತ ಜೀವನ ನಡೆಸುವ ಪ್ರತಿಜ್ಞೆ ಸ್ವೀಕರಿಸಿದರು.
ನಿರ್ಮಲ ಆಸ್ಪತ್ರೆಯಿಂದ ವಂಟಮೂರಿ ಕಾರ್ನರ್ ಮೂಲಕ ರ‌್ಯಾಲಿ ಸಾಗಿತು. ಭಾಗವಹಿಸಿದ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ ತಂಬಾಕು ವಿರೋಧಿ ಸಂದೇಶ ಸಾರುವ ಲಕಗಳೊಂದಿಗೆ ಘೋಷಣೆ ಕೂಗುತ್ತ ಜಾಗೃತಿ ಮೂಡಿಸಿದರು.