ಬಾಲ್ಯವಿವಾಹ ನಿಷೇಧ ಜಾಗೃತಿ

ತುರಮರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹಮುಕ್ತ ಜಾಗತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಆನಂದ ಮಾಳಗಿ, ಪಿ.ಬಿ.ತಳವಾರ, ಎನ್.ಎ.ಮರೇದ, ಇತರರಿದ್ದರು.
ತುರಮರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹಮುಕ್ತ ಜಾಗತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಆನಂದ ಮಾಳಗಿ, ಪಿ.ಬಿ.ತಳವಾರ, ಎನ್.ಎ.ಮರೇದ, ಇತರರಿದ್ದರು.
Published on
ಚನ್ನಮ್ಮನ ಕಿತ್ತೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಾಲ್ಯವಿವಾಹ ತಡೆಗಟ್ಟುವ ಮತ್ತು ಅದರಿಂದಾಗುವ ತೊಂದರೆಗಳ ಬಗ್ಗೆ ತಿಳಿ ಹೇಳಲಾಯಿತು. ಬಾಲ್ಯವಿವಾಹ ನಡೆಯುತ್ತಿದ್ದರೆ, ತಕ್ಷಣ ಮಕ್ಕಳ ಸಹಾಯವಾಣಿ ಅಥವಾ ಪೊಲೀಸ್ ಇಲಾಖೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ತಿಳಿಸಿದರು. ಬಾಲ್ಯವಿವಾಹ ತಡೆಗಟ್ಟಲು ಸಾರ್ವಜನಿಕರು ಸಹಕಾರ ನೀಡಬೇಕು. ಬಾಲ್ಯ ವಿವಾಹ ಕಾನೂನುಬಾಹಿರವಾಗಿದೆ. ಅದನ್ನು ಎಲ್ಲರೂ ವಿರೋಧಿಸಬೇಕೆಂದು ಕಾನೂನು ಸೇವಾ ಸಮಿತಿ ವಕೀಲರು ತಿಳಿಸಿದರು.
ಚನ್ನಮ್ಮನ ಕಿತ್ತೂರು ತಾಲೂಕಿನ ವೀರಾಪುರ, ಅಂಬಡಗಟ್ಟಿ, ದೇವರಶೀಗಿಹಳ್ಳಿ, ಕಾದರವಳ್ಳಿ, ಹುಣಶೀಕಟ್ಟಿ, ತುರಮರಿ, ಕಲಭಾವಿ ಸೇರಿ ವಿವಿಧ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಬಾಲ್ಯವಿವಾಹಮುಕ್ತ ಭಾರತ, ಬಾಲ್ಯವಿವಾಹ ನಿಷೇಧ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಕಾನೂನು ಸೇವಾ ಸಮಿತಿ ವಕೀಲರಾದ ಪಿ.ಬಿ.ತಳವಾರ,ಎನ್.ಎ.ಮರೇದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಕುಂಟೋಜಿ, ಕಿತ್ತೂರು ನ್ಯಾಯಾಲಯದ ಸಿಬ್ಬಂದಿ ದ್ಯಾಮಣ್ಣ ಕಬ್ಬೂರ, ಆನಂದ ಮಾಳಗಿ, ಆಯಾ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net