ಡಾ.ಸರಜೂ ಕಾಟ್ಕರ್​ಗೆ ಪ್ರಶಸ್ತಿ

Award for Dr. Saraju Katkar
Award for Dr. Saraju Katkar
Published on
ಬೆಳಗಾವಿ: ಕಲೆ, ಸಾಹಿತ್ಯ, ಸಮಾಜ ಸೇವಾ ೇತ್ರದಲ್ಲಿ ಅನನ್ಯ ಸಾಧನೆ ಮಾಡಿದವರಿಗೆ ಕೊಡ ಮಾಡುವ 2026ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನರಾಮ್​ ಪ್ರಶಸ್ತಿಗೆ ಬೆಳಗಾವಿಯ ಸಾಹಿತಿ ಡಾ.ಸರಜೂ ಕಾಟ್ಕರ್​ ಆಯ್ಕೆಯಾಗಿದ್ದಾರೆ.
ವೃತ್ತಿಯಲ್ಲಿ ಪತ್ರಕರ್ತರೂ ಆಗಿರುವ ಡಾ. ಕಾಟ್ಕರ್​ ಜನಿಸಿದ್ದು 1953 ಆಗಸ್ಟ್​ 14ರಂದು ಹುಬ್ಬಳ್ಳಿಯಲ್ಲಿ. ಕರ್ನಾಟಕ ವಿವಿಯಿಂದ ಕನ್ನಡ&ಮರಾಠಿ ದಲಿತ ಸಾಹಿತ್ಯ; ಒಂದು ಅಧ್ಯಯನ ವಿಷಯವಾಗಿ (1994) ಪಿಎಚ್​.ಡಿ ಪಡೆದಿದ್ದಾರೆ. ಕನ್ನಡ ಪತ್ರಿಕೆ ವರದಿಗಾರರಾಗಿ ವೃತ್ತಿ ಆರಂಭಿಸಿ, ನಂತರ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ, ಹಲವು ಅಕಾಡೆಮಿ, ಸಮಿತಿಯ ವಿವಿಧ ಜವಾಬ್ದಾರಿ ಸ್ಥಾನ ನಿರ್ವಹಿಸಿದ್ದಾರೆ.
ಮರಾಠಿ ದಲಿತ ಸಾಹಿತ್ಯ, ಅಟಲ್​ ಬಿಹಾರಿ ವಾಜಪೇಯಿ ಕವಿತೆಗಳು, ದೇವರಾಯ, ಜುಲೈ 22, 1947, ಬಾಜೀರಾಯ ಮಸ್ತಾನಿ, ಸಾವಿತ್ರಿಬಾಯಿ ಫುಲೆ, ಗೌರೀಪುರ, ದಂಗೆ ಹೀಗೆ 80ಕ್ಕೂ ಅಧಿಕ ಪುಸ್ತಕ ಬರೆದಿದ್ದಾರೆ. ಇವುಗಳಲ್ಲಿ ದೇವರಾಯ, ಇಂಗಳ ಮಾರ್ಗ, ಜುಲೈ 22,1947 (ಇದಕ್ಕೆ ರಾಜ್ಯ ಪ್ರಶಸ್ತಿ ಬಂದಿದೆ) ಕಾದರಂಬರಿ ಚಲನಚಿತ್ರವಾಗಿವೆ. ಅವರು ಪತ್ರಿಕೋದ್ಯಮ ಮತ್ತು ಸಾಹಿತ್ಯ ೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಪ್ರಶಸ್ತಿ 5 ಲ ರೂ. ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ಒಳಗೊಂಡಿದೆ. ಏ.5ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net