ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುವ ಆಟಿಸಂ

ನಿರ್ಮಲ ಆಸ್ಪತ್ರೆಯ ಆಟಿಸಂ ಕೇಂದ್ರವನ್ನು ಬಾಳಾಸಾಹೇಬ ಕಾಮತ ಉದ್ಘಾಟಿಸಿದರು. ಡಾ.ಜೀವನ ಮಾಳಿ, ಡಾ.ಚೈತನ್ಯ ಕರಾಂಜೆ, ಡಾ.ಸಮೀರ್ ಪಾಚೋರೆ, ಡಾ.ಚಂದ್ರಶೇಖರ ಹಳಿಂಗಳೆ ಇತರರಿದ್ದರು.
ನಿರ್ಮಲ ಆಸ್ಪತ್ರೆಯ ಆಟಿಸಂ ಕೇಂದ್ರವನ್ನು ಬಾಳಾಸಾಹೇಬ ಕಾಮತ ಉದ್ಘಾಟಿಸಿದರು. ಡಾ.ಜೀವನ ಮಾಳಿ, ಡಾ.ಚೈತನ್ಯ ಕರಾಂಜೆ, ಡಾ.ಸಮೀರ್ ಪಾಚೋರೆ, ಡಾ.ಚಂದ್ರಶೇಖರ ಹಳಿಂಗಳೆ ಇತರರಿದ್ದರು.
Published on

ಕಾಗವಾಡ:

ಕಲಿಕೆಯಲ್ಲಿ ಹಿಂದುಳಿದಿರುವ ಮತ್ತು ಏಕಾಂಗಿತನ ಬಯಸುವ ವಿಶೇಷ ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಆರಂಭಿಕ ರೋಗನಿರ್ಣಯ, ಸರಿಯಾದ ಶಿಕ್ಷಣ, ಚಿಕಿತ್ಸೆ ಮತ್ತು ಪಾಲಕರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖವಾಗಿದೆ. ಅಂತಹ ಮಕ್ಕಳು ಸಾಮಾನ್ಯ ಜೀವನ ನಡೆಸಲು ಡಾ.ಚಂದ್ರಶೇಖರ ಹಳಿಂಗಳೆ ಸ್ಥಾಪಿಸಿರುವ ನಿರ್ಮಲ ಆಟಿಸಂ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಾಂಗಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ಆಯುಕ್ತ ಬಾಳಾಸಾಹೇಬ ಕಾಮತ ಹೇಳಿದರು.

ಮಿರಜ ಪಟ್ಟಣದ ನಿರ್ಮಲ ಆಸ್ಪತ್ರೆಯಲ್ಲಿ 80ನೇ ಸ್ವಾತಂತ್ರೊೃೀತ್ಸವ ದಿನಾಚರಣೆ ಅಂಗವಾಗಿ ಶನಿವಾರ ಧ್ವಜಾರೋಹಣ ಹಾಗೂ ನಿರ್ಮಲ ಆಟಿಸಂ ಮತ್ತು ಅಂಗವೈಕಲ್ಯ ಶಿಕ್ಷಣ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಬಾಲರೋಗ ವೈದ್ಯರಾದ ಡಾ.ಜೀವನ ಮಾಳಿ, ಡಾ.ಚೈತನ್ಯ ಕರಾಂಜೆ ಮತ್ತು ಡಾ.ಸಮೀರ್ ಪಾಚೋರೆ ಮಾತನಾಡಿ, ಪ್ರತಿ ಮಗು ವಿಭಿನ್ನ ಕಲಿಕಾ ಶೈಲಿ ಹೊಂದಿದೆ. ಸರಿಯಾದ ಶಿಕ್ಷಣ ಮತ್ತು ಮಾರ್ಗದರ್ಶನದ ಮೂಲಕ ಅವರ ಸಾಮರ್ಥ್ಯಕ್ಕೆ ಸರಿಯಾದ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.
ಡಾ.ಚಂದ್ರಶೇಖರ ಹಳಿಂಗಳೆ ಮತ್ತು ಡಾ.ನಿಶಾ ಹಳಿಂಗಳೆ ಮಾತನಾಡಿ, ಮಿರಜ ಪಟ್ಟಣದಲ್ಲಿ ಪ್ರಾರಂಭಿಸಿರುವ ಆಟಿಸಂ ಕೇಂದ್ರದ ಲಾಭ ಪಡೆದುಕೊಳ್ಳಬೇಕು ಎಂದರು.
ಸ್ವಾತಂತ್ರೊೃೀತ್ಸವ ನಿಮಿತ್ತ ಆಟಿಸಂ ಕೇಂದ್ರದ ವಿದ್ಯಾರ್ಥಿಗಳು ವಿವಿಧ ವೇಷಭೂಷಣ ಧರಿಸಿ ಗಮನ ಸೆಳೆದರು.
ಸಾಂಗಲಿ ಫಿಂಗರಪ್ರಿಂಟ್ ಶಾಖೆಯ ಜೂನಿಯರ್ ಎಕ್ಸ್‌ಪರ್ಟ್ ಎಪಿಐ ಪ್ರಿಯಾಂಕಾ ಜಾಧವ, ಡಾ.ಅಶೋಕ ಕುಲಕರ್ಣಿ, ಡಾ.ಮುರಗೇಶ ಮಠಪತಿ, ಡಾ.ಪ್ರಕಾಶ ಪವಾರ, ಡಾ.ಕೇವಲ ಪಾಟೀಲ, ಡಾ.ಶೀತಲ ಶಿಂಧೆ, ಡಾ.ಕೃಷ್ಣರಾಜ ಠಾಕೂರ, ಡಾ.ದೀಪ್ತಿ ಕುಲಕರ್ಣಿ, ಡಾ.ಸೂರ್ಯಕಾಂತ ಹಳಿಂಗೆಳೆ, ಡಾ.ಮಾಧುರಿ ವಾಂಗಪತಿ, ಡಾ.ಶ್ರದ್ಧಾ ಗಾಯಕವಾಡ, ಪೂಜಾ ನರಗುಚ್ಛೆ, ವಿನಾಯಕ ಕವಡೆ, ಸಚಿನ ಪಾಟೀಲ, ರಾಹುಲ ಲೋಹಾರ, ಸಾಗರ ಜಾಧವ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net