ಮತದಾರರ ಪರಿಷ್ಕರಣೆಗೆ ಸಹಕರಿಸಿ

ಮತದಾರರ ಪಟ್ಟಿ ಪರಿಷ್ಕರಣೆಗೆ ಎಸಿ ಸುಭಾಸ ಸಂಪಗಾವಿ ಚಾಲನೆ ನೀಡಿದರು. ರವೀಂದ್ರ ಹಾದಿಮನಿ, ರಶ್ಮೀ ಜಕಾತೆ, ವೀರಣ್ಣ ವಾಲಿ ಇತರರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಎಸಿ ಸುಭಾಸ ಸಂಪಗಾವಿ ಚಾಲನೆ ನೀಡಿದರು. ರವೀಂದ್ರ ಹಾದಿಮನಿ, ರಶ್ಮೀ ಜಕಾತೆ, ವೀರಣ್ಣ ವಾಲಿ ಇತರರಿದ್ದರು.
Published on
ಕಾಗವಾಡ: ಉದ್ಯೋಗಕ್ಕಾಗಿ ಬೇರೆಡೆ ತೆರಳಿದ ಮತದಾರರನ್ನು ಪತ್ತೆ ಹಚ್ಚಿ ಪರಿಷ್ಕರಣೆ ಮಾಡುತ್ತೇವೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಸುಭಾಸ ಸಂಪಗಾವಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿ ಒಂದೆಡೆ ಮತದಾನದ ಹಕ್ಕು ಹೊಂದಿರಬೇಕು. ಬಿಎಲ್‌ಓಗಳು ಮೂರು ಬಾರಿ ಮನೆಗೆ ಭೇಟಿ ನೀಡಿದಾಗ ವ್ಯಕ್ತಿಯ ಮಾಹಿತಿ ಸಿಗದಿದ್ದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದರು.
ಕಾಗವಾಡದಲ್ಲಿ ಒಟ್ಟು ೨,೦೫,೩೯೦ ಮತದಾರರಿದ್ದು, ಮ್ಯಾಪಿಂಗ್ ವೇಳೆ ೧,೯೭,೧೬೭ ಮತದಾರರು ಕಂಡುಬಂದಿದ್ದಾರೆ. ೬ ಸಾವಿರ ಮತದಾರರ ಬಗ್ಗೆ ಪರೀಕ್ಷಿಸಲಾಗುವುದು. ಈ ಕಾರ್ಯಕ್ಕೆ ಮೂರು ನೋಡಲ್ ಅಧಿಕಾರಿ ನೇಮಿಸಲಾಗಿದೆ. ಮತದಾರರ ಮನೆ ಬಾಗಲಿಗೆ ಹೋಗಿ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿ ಅರ್ಜಿ ತುಂಬಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ತಹಸೀಲ್ದಾರ್ ರವೀಂದ್ರ ಹಾದಿಮನಿ, ಗ್ರೇಡ್-೨ ತಹಸೀಲ್ದಾರ್ ರಶ್ಮೀ ಜಕಾತೆ, ತಾಪಂ ಇಒ ವೀರಣ್ಣಾ ವಾಲಿ, ಚುನಾವಣಾಧಿಕಾರಿ ಮಹಾಂತೇಶ ಬಾದವಾಡಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net