6.36 ಕೋಟಿ ಮೌಲ್ಯದ ಸ್ವತ್ತುಗಳು ಮಾಲೀಕರಿಗೆ ಹಸ್ತಾಂತರ

ಬೆಳಗಾವಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಾದ ಸ್ವತ್ತುಗಳನ್ನು ಆಯಾ ಮಾಲೀಕರಿಗೆ ಪೊಲೀಸ ಆಯುಕ್ತ ಭೂಷಣ ಬೋರಸೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಬೆಳಗಾವಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಾದ ಸ್ವತ್ತುಗಳನ್ನು ಆಯಾ ಮಾಲೀಕರಿಗೆ ಪೊಲೀಸ ಆಯುಕ್ತ ಭೂಷಣ ಬೋರಸೆ ಸಾಂಕೇತಿಕವಾಗಿ ಹಸ್ತಾಂತರಿಸಿದರು.
Published on
ಬೆಳಗಾವಿ: ನಗರ ಪೊಲೀಸ್ ಕಮೀಷ್ನರೇಟ್ ವತಿಯಿಂದ ಪೊಲೀಸ್ ಪರೇಡ್ ಮೈದಾನದಲ್ಲಿ ಮಂಗಳವಾರ ಜರುಗಿದ ಪ್ರಾಪರ್ಟಿ ಪರೇಡ್‌ನಲ್ಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 2025ರಲ್ಲಿ ಸುಲಿಗೆ, ಸರಗಳ್ಳತನ, ಮನೆ ಕಳ್ಳತನ ಹಾಗೂ ವಾಹನ ಕಳ್ಳತನ ಪ್ರಕರಣಗಳಲ್ಲಿನ ಸುಮಾರು 6.36 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಆಯಾ ಮಾಲೀಕರಿಗೆ ಹಸ್ತಾಂತರಿಸಲಾಯಿತು.
ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 2,36,69,684ರೂ. ಮೌಲ್ಯದ ಒಟ್ಟು 2 ಕೆಜಿ 332 ಗ್ರಾಂ 645 ಮಿ.ಗ್ರಾಂ. ಚಿನ್ನಾಭರಣ, 13,059ರೂ. ಮೌಲ್ಯದ ಒಟ್ಟು 294 ಗ್ರಾಂ. ಬೆಳ್ಳಿಯ ಆಭರಣಗಳು, 3,99,01,000ರೂ. ಮೌಲ್ಯದ ಒಟ್ಟು 85 ವಾಹನ(8 ಟ್ರಕ್, 14 ಚಕ್ರದ 7 ಟ್ರಕ್, 5 ವಿವಿಧ ಕಂಪನಿಯ ಕಾರ್ ಹಾಗೂ 65 ವಿವಿಧ ಕಂಪನಿಯ ಬೈಕ್) 1.10 ಲಕ್ಷ ರೂ. ನಗದು, 20 ಲಕ್ಷ ಮೌಲ್ಯ 140 ಮೊಬೈಲ್ ಸೇರಿದಂತೆ ಹೀಗೆ ಒಟ್ಟು ರೂ.6,36,93,743 ಮೌಲ್ಯದ ಸ್ವತ್ತುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಸ್ವತ್ತಿನ ಮಾಲೀಕರಿಗೆ ಹಸ್ತಾಂತರಿಸಿದರು.
ಪೊಲೀಸ್ ಆಯುಕ್ತ ಭೂಷಣ ಬೋರಸೆ ಹಾಗೂ ಇತರೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆಯಾ ಠಾಣೆ ವ್ಯಾಪ್ತಿಯ ಪ್ರಕರಣಗಳ ದೂರುದಾರದಾರರನ್ನು ಆಹ್ವಾನಿಸಿ, ಸ್ವತ್ತು ಹಸ್ತಾಂತರ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net