ಬೆಳಗಾವಿ ಮಹಾನಗರದಲ್ಲಿ 3ಮನೆ, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿ ನಗರದಲ್ಲಿ ಐದು ನಿವೇಶನ, 5.960 ಕೆಜಿ ಚಿನ್ನ ಹಾಗೂ ವಜ್ರದ ಆಭರಣ, 5ಕೆಜಿಯ ಬೆಳ್ಳಿ ಆಭರಣ, ವಸ್ತುಗಳು, 3.12 ಕೋಟಿ ರೂ. ಬ್ಯಾಂಕ್ ಎಫ್‌ಡಿ, ಒಂದು ಕಾರು ಹಾಗೂ ಬೈಕ್ ಸೇರಿ 14 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ. ಶೋಧನಾ ಕಾರ್ಯ ಮುಂದುವರಿದಿದೆ ಎಂದು ಲೋಕಾಯುಕ್ತ ಅಧೀಕ್ಷಕರು ತಿಳಿಸಿದ್ದಾರೆ.