ಕಲಾವಿದರು ಎಲ್ಲರಂತೆ ಸಾಮಾನ್ಯ ಮನುಷ್ಯರು

ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ರಂಗಗೀತೆಗಳ ತರಬೇತಿಯನ್ನು ಬಿ.ಜಯಶ್ರೀ ಉದ್ಘಾಟಿಸಿದರು. ಮೊಹಮ್ಮದ್ ರೋಷನ್, ಡಾ.ಸಾವಿತ್ರಿ ದೊಡ್ಡಣ್ಣವರ, ಸರ್ವಮಂಗಳ ಅರಳಿಮಟ್ಟಿ, ವಿಜಯಲಕ್ಷ್ಮೀ ಪಾಟೀಲ, ಉಪೇಂದ್ರಕುಮಾರ ಇತರರಿದ್ದರು.
ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ರಂಗಗೀತೆಗಳ ತರಬೇತಿಯನ್ನು ಬಿ.ಜಯಶ್ರೀ ಉದ್ಘಾಟಿಸಿದರು. ಮೊಹಮ್ಮದ್ ರೋಷನ್, ಡಾ.ಸಾವಿತ್ರಿ ದೊಡ್ಡಣ್ಣವರ, ಸರ್ವಮಂಗಳ ಅರಳಿಮಟ್ಟಿ, ವಿಜಯಲಕ್ಷ್ಮೀ ಪಾಟೀಲ, ಉಪೇಂದ್ರಕುಮಾರ ಇತರರಿದ್ದರು.
Published on

ಬೆಳಗಾವಿ : ತಮಗೆ ಕರಗತವಾಗಿರುವ ಕಲೆ ಪ್ರದರ್ಶಿಸುವಾಗ ಮಾತ್ರ ಕಲಾವಿದರು ಇತರರಿಗಿಂತ ವಿಶೇಷರಾಗುತ್ತಾರೆ. ಅದರ ಹೊರತಾಗಿ ವೇದಿಕೆಯಿಂದ ಇಳಿದ ತಕ್ಷಣವೇ ಅವರೂ ಎಲ್ಲರಂತೆ ಓರ್ವ ಸಾಮಾನ್ಯ ಮನುಷ್ಯ. ಇದನ್ನು ಅರಿತುಕೊಂಡು ಮುನ್ನಡೆದಾಗ ಮಾತ್ರ ಸಾಧನೆಯ ಜೀವನಕ್ಕೊಂದು ಪರಿಪೂರ್ಣತೆ ಬರುತ್ತದೆ ಎಂದು ಹಿರಿಯ ರಂಗಕರ್ಮಿ ಬಿ.ಜಯಶ್ರೀ ಹೇಳಿದರು.

ನಾನು ನಮ್ಮವರೊಂದಿಗೆ ಹಾಗೂ ಓದಿ ಫೌಂಡೇಶನ್‌ದಿಂದ ಭರತೇಶ ವಿದ್ಯಾಸಂಸ್ಥೆಯ ಆವರಣದಲ್ಲಿ ಏರ್ಪಡಿಸಿದ್ದ ರಂಗಗೀತೆಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಹಾಡುಗಾರಿಕೆಯಂತೆ ರಂಗಗೀತೆಗಳಿಗೆ ಆಲಾಪ, ಸ್ವರ, ಲಯಗಳ ಕಟ್ಟುಪಾಡಿಗಳಿಲ್ಲ ಎಂಬ ಮಾತಿದೆ. ಆದರೆ ರಂಗಗೀತೆಗಳಿಗೂ ತನ್ನದೇಯಾದ ಕಟ್ಟುಪಾಡಿಗಳಿವೆ. ಅದನ್ನು ಪಾಲಿಸಿದಾಗ ಮಾತ್ರ ರಂಗಗೀತೆಗಳು ಒಲಿಯುತ್ತವೆ ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಜೀವನದಲ್ಲಿ ಕಲಿಕೆಗೆ ಯಾವುದೇ ವಯಸ್ಸಿನ ಗಡಿ ಇಲ್ಲ. ಆದರೆ, ಕೆಲವರು ಸಮಯವೇ ಇಲ್ಲ ಎಂಬ ಸಬೂಬು ಹೇಳುತ್ತಿರುತ್ತಾರೆ. ಹೀಗೆ ಹೇಳುವವರು ತಮಗೆ ತಾವೇ ಮೋಸ ಮಾಡಿಕೊಂಡಂತೆ. ಸಮಾಜದಲ್ಲಿ ಎಲ್ಲರಿಗೂ 24 ಗಂಟೆಗಳೇ ಇರುವುದು. ಅದನ್ನೇ ಸರಿಯಾಗಿ ನಿರ್ವಹಣೆ ಮಾಡಿಕೊಂಡು ಮುನ್ನಡೆದವರು ಮಾತ್ರ ಸಾಧಕರಾಗಿ ಬೆಳೆಯುತ್ತಾರೆ ಎಂದು ಹೇಳಿದರು.
ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಸಾವಿತ್ರಿ ದೊಡ್ಡಣ್ಣವರ, ಉಪೇಂದ್ರ ಕುಮಾರ, ಸರ್ವಮಂಗಳ ಅರಳಿಮಟ್ಟಿ, ವಿಜಯಲಕ್ಷ್ಮಿ ಪಾಟೀಲ, ಲಲಿತಾ ಹೂಗಾರ, ಮಾಧುರಿ ಹಿರೇಮಠ ಇತರರಿದ್ದರು.
ಎರಡು ದಿನದ ಶಿಬಿರದಲ್ಲಿ ಬಿ.ಜಯಶ್ರೀಯವರು ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ರಂಗಗೀತೆಗಳ ಹಾಡುಗಾರಿಕೆಯನ್ನು ಕಲಿಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net