ಅರಿಹಂತ ಸೊಸೈಟಿಗೆ 7.32 ಕೋಟಿ ರೂ. ಲಾಭ

ಹುಲ್ಲೋಳಿಯ ಅರಿಹಂತ ಸೊಸೈಟಿಯಲ್ಲಿ ಆನಂದ ಚೌಗಲಾ ಮಾತನಾಡಿದರು. ಬಿ.ಬಿ.ಚೌಗಲಾ, ಬಾಹುಬಲಿ ನಾಗನೂರಿ, ಪಿ.ಆರ್.ಚೌಗಲಾ ಇತರರಿದ್ದರು.
ಹುಲ್ಲೋಳಿಯ ಅರಿಹಂತ ಸೊಸೈಟಿಯಲ್ಲಿ ಆನಂದ ಚೌಗಲಾ ಮಾತನಾಡಿದರು. ಬಿ.ಬಿ.ಚೌಗಲಾ, ಬಾಹುಬಲಿ ನಾಗನೂರಿ, ಪಿ.ಆರ್.ಚೌಗಲಾ ಇತರರಿದ್ದರು.
Published on
ಹುಕ್ಕೇರಿ: ತಾಲೂಕಿನ ಹುಲ್ಲೋಳಿಯ ಅರಿಹಂತ ಸೌಹಾರ್ದ ಸಹಕಾರ ಸಂಘ ಆರ್ಥಿಕ ವರ್ಷಾಂತ್ಯಕ್ಕೆ 7.32 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಭರಮಪ್ಪ ಚೌಗಲಾ ಹೇಳಿದರು.
ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಂಘ 342 ಕೋಟಿ ರೂ. ಠೇವಣಿ ಹೊಂದಿ 260 ಕೋಟಿ ರೂ. ಸಾಲ ವಿತರಿಸಿದೆ. 378 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 3,058 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ ಸದಸ್ಯರಿಗೆ ಶೇ.25 ಲಾಭಾಂಶ ವಿತರಿಸಲು ನಿರ್ಧರಿಸಿದೆ ಎಂದರು.
ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ಹಿರಿಯ ನಿರ್ದೇಶಕ ಪಿ.ಆರ್.ಚೌಗಲಾ, ರವೀಂದ್ರ ಚೌಗಲಾ ಮಾತನಾಡಿ, ಸಂಘ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡುತ್ತಿದೆ. ಸಂಘದಡಿ ಪ್ರಾರಂಭಿಸಲಾದ ಅರಿಹಂತ ಶಿಕ್ಷಣ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದೆ. ಕಲ್ಯಾಣ ಮಂಟಪ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಸಂಘ ಶೇ.97 ಸಾಲ ವಸೂಲಾತಿ ಮಾಡಿದೆ. ಪ್ರಧಾನ ಕಚೇರಿ ಸೇರಿದಂತೆ ಒಟ್ಟು 13 ಶಾಖೆಗಳ ಮೂಲಕ ಜಿಲ್ಲಾದ್ಯಂತ ಸಂಘ ಕಾರ್ಯ ನಿರ್ವಹಿಸುತ್ತಿದೆ. ಸಂಘಕ್ಕೆ ಹಲವಾರು ಪ್ರಶಸ್ತಿ ಲಭಿಸಿವೆ ಎಂದರು.
ನಿರ್ದೇಶಕರಾದ ರಾಮಪ್ಪ ಗೋಟೂರಿ, ಜಿನ್ನಪ್ಪ ಸಪ್ತಸಾಗರ, ಅಶೋಕ ಚೌಗಲಾ, ಪ್ರಕಾಶ ಚೌಗಲಾ, ಶ್ರುತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪ ಸಂಕೇಶ್ವರಿ, ಅರುಣ ಚೌಗಲಾ, ಮಹಾವೀರ ಚೌಗಲಾ, ಅಜಿತ್ ಚೌಗಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net