ವಿಬಿ-ಜಿ ರಾಮ್ ಜಿ ಯೋಜನೆಯಡಿ 318 ಕಾಮಗಾರಿಗೆ ಅವಕಾಶ

ತರಬೇತಿ ಸಭೆಯಲ್ಲಿ ಯಶವಂತ ಕುಮಾರ ಮಾತನಾಡಿದರು. ಸಂಗನಗೌಡ ಹಂದ್ರಾಳ
ತರಬೇತಿ ಸಭೆಯಲ್ಲಿ ಯಶವಂತ ಕುಮಾರ ಮಾತನಾಡಿದರು. ಸಂಗನಗೌಡ ಹಂದ್ರಾಳ
Published on
ಬೆಳಗಾವಿ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕಾ ಮಿಷನ್ (ವಿಬಿ-ಜಿ ರಾಮ್ ಜಿ’) ಯೋಜನೆಯು ಜುಲೈ-1 ರಿಂದ ಜಾರಿಯಾಗಿದ್ದು, ಈ ಹಿಂದೆ ಕೂಲಿಕಾರರಿಗೆ ನಿಗದಿಪಡಿಸಲಾಗಿದ್ದ ಕೂಲಿ ದರವನ್ನು ಕೂಡ ಹೆಚ್ಚಳ ಮಾಡಲಾಗಿದೆ ಎಂದು ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶಂತಕುಮಾರ ಅವರು ಹೇಳಿದರು .
ನಗರದ ಪಶು ಆಸ್ಪತ್ರೆ ರೈತ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಜುಲೈ 3ರಂದು ನಡೆದ ವಿಬಿ-ಜಿ ರಾಮ್ ಜಿ’ ತರಭೇತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಒಬ್ಬ ಕೂಲಿಕಾರರಿಗೆ ಪ್ರತಿ ದಿನಕ್ಕೆ ರೂ.370 ಇದ್ದ ಕೂಲಿ ದರವನ್ನು ರೂ.12 ಹೆಚ್ಚಿಸಲಾಗಿದ್ದು, ಜು.1 ರಿಂದ ರೂ.382 ಕೂಲಿ ದರ ನಿಗದಿಪಡಿಸಲಾಗಿದೆ. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಬದಲಾಗಿ ಈಗ 125 ದಿನಗಳವರೆಗೆ ಉದ್ಯೋಗ ನೀಡಲಾಗುವುದು ಕೂಲಿಕಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ವಿಬಿ-ಜಿ ರಾಮ್ ಜಿ ಯೋಜನೆಯಡಿ ಒಟ್ಟು 318 ಅನುಮೋದಿತ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ನೀಡಲಾಗಿದ್ದು, ಇದರಿಂದ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ತಾಪಂ ಸಹಾಯಕ ನಿರ್ದೇಶಕರು ಬಿ.ಡಿ ಕಡೇಮನಿ, ವಿಬಿ-ಜಿ ರಾಮ್ ಜಿ ತರಬೇತಿಗಾರರಾದ ಸಂಗನಗೌಡ ಹಂದ್ರಾಳ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ವಿಷಯಗಳ ವಿಷಯ ನಿರ್ವಾಹಕರು, ತಾಪಂ ಹಾಗೂ ತಾಂತ್ರಿಕ ಸಿಬ್ಬಂದಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net