ವೈದ್ಯರ ನಿಸ್ವಾರ್ಥ ಸೇವೆಗೆ ಮೆಚ್ಚುಗೆ

ಬೈಲಹೊಂಗಲ ನಗರದ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೈಲಹೊಂಗಲ ಗೆಳೆಯರ ಬಳಗ ಸದಸ್ಯರು ವೈದ್ಯರನ್ನು ಸನ್ಮಾನಿಸಿದರು.
ಬೈಲಹೊಂಗಲ ನಗರದ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೈಲಹೊಂಗಲ ಗೆಳೆಯರ ಬಳಗ ಸದಸ್ಯರು ವೈದ್ಯರನ್ನು ಸನ್ಮಾನಿಸಿದರು.
Published on
ಬೈಲಹೊಂಗಲ: ವೈದ್ಯರ ದಿನಾಚರಣೆಯ ಅಂಗವಾಗಿ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರನ್ನು ಸನ್ಮಾನಿಸಿ, ಅವರ ಸಮಾಜಮುಖಿ ಸೇವೆಯನ್ನು ಗುರುತಿಸುವ ಕಾರ್ಯಕ್ರಮವನ್ನು ಬೈಲಹೊಂಗಲ ಗೆಳೆಯರ ಬಳಗ ಹಮ್ಮಿಕೊಂಡಿತ್ತು.
‘ವೈದ್ಯರ ಸೇವೆ ಗುರುತಿಸೋಣ, ಸ್ಮರಿಸೋಣ ಹಾಗೂ ಗೌರವಿಸೋಣ’ ಎಂಬ ಆಶಯದಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಲಪ್ರಭಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ.ಮಂಜುನಾಥ ಮುದುಕನಗೌಡರ ಹಾಗೂ ಡಾ.ಅಶೋಕ ದೊಡವಾಡ, ಶರಣಕುಮಾರ ಅಂಗಡಿ ಅವರನ್ನು ಗೌರವಿಸಲಾಯಿತು.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಜಕನೂರ, ಡಾ.ಅಗ್ನಿಹೋತ್ರಿ ಹಾಗೂ ಡಾ.ಸಾಗರ ಕುಲಕರ್ಣಿ ಅವರನ್ನು ಸನ್ಮಾನಿಸಿ, ಜನರ ಆರೋಗ್ಯ ರಕ್ಷಣೆಗೆ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಕೊಂಡಾಡಲಾಯಿತು.
ಮಲಪ್ರಭಾ ಆಸ್ಪತ್ರೆಯ ವೈದ್ಯರು ಮಾತನಾಡಿ, ಅತ್ಯಾಧುನಿಕ ಸೌಲಭ್ಯ ಅಳವಡಿಸಿಕೊಂಡು ಜನರಿಗೆ ಇನ್ನಷ್ಟು ಗುಣಮಟ್ಟದ ಆರೋಗ್ಯ ಸೇವೆ ನೀಡಲು ಆಸ್ಪತ್ರೆ ಬದ್ಧವಾಗಿದೆ ಎಂದು ತಿಳಿಸಿದರು.
ಬೈಲಹೊಂಗಲ ಗೆಳೆಯರ ಬಳಗದ ಸದಸ್ಯ ಹಸನ್ ಗೊರವನಕೊಳ್ಳ, ಸ್ಕೌಟ್ ಕಾರ್ಯದರ್ಶಿ ಅಜ್ಜಪ್ಪ ಅಂಗಡಿ, ರವಿ ತುರಮರಿ, ಶ್ರೀಶೈಲ ಹಿರೇಮಠ, ಸಿದ್ದು ನೇಸರಗಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದು, ವೈದ್ಯರ ಸೇವೆಗೆ ಕತಜ್ಞತೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net