ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ಸಾರ್ವಜನಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಸುರೇಶ ಮುಂಜೆಗೆ  ಹ್ಯೂಮನ್ ರೈಟ್ಸ್ ಕೇರ್ ಆರ್ಗನೈಜೇಶನ್ ಸದಸ್ಯರು ಮನವಿ ಸಲ್ಲಿಸಿದರು. ಸಚಿನ ಪವಾರ, ಜ್ಞಾನೇಶ್ವರ ಚೌಹಾಣ, ಅವಿನಾಶ ಮಾನೆ ಇತರರಿದ್ದರು.
ಸಾರ್ವಜನಿಕರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಸುರೇಶ ಮುಂಜೆಗೆ ಹ್ಯೂಮನ್ ರೈಟ್ಸ್ ಕೇರ್ ಆರ್ಗನೈಜೇಶನ್ ಸದಸ್ಯರು ಮನವಿ ಸಲ್ಲಿಸಿದರು. ಸಚಿನ ಪವಾರ, ಜ್ಞಾನೇಶ್ವರ ಚೌಹಾಣ, ಅವಿನಾಶ ಮಾನೆ ಇತರರಿದ್ದರು.
Published on
ನಿಪ್ಪಾಣಿ: ಸಾರ್ವಜನಿಕರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು.೧೫ರಿಂದ ತಹಸೀಲ್ದಾರ್ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಹ್ಯೂಮನ್ ರೈಟ್ಸ್ ಕೇರ್ ಆರ್ಗನೈಜೇಶನ್ ಸದಸ್ಯರು ಎಚ್ಚರಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು. ಖಾಸಗಿ ಶಾಲೆಗಳ ವಿಪರೀತ ಶುಲ್ಕಕ್ಕೆ ಕಡಿವಾಣ ಹಾಕಬೇಕು. ಜವಾಹರ ಸರೋವರ ಸಮಸ್ಯೆ ಪರಿಹರಿಸಿ ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಬೇಕು. ಸಾರಸ್ವತಿ ಪ್ರದೇಶದ ನಗರಸಭೆ ಜಮೀನನ್ನು ಉದ್ಯಾನ ಹಾಗೂ ಜಿಮ್ ನಿರ್ಮಾಣಕ್ಕೆ ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು. ಈ ಕುರಿತು ಸಂಬAಽತ ಅಽಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ತಹಸೀಲ್ದಾರ್ ಸುರೇಶ ಮುಂಜೆಗೆ ಮನವಿ ಸಲ್ಲಿಸಿದರು.
ಸಂಸ್ಥೆ ಪದಾಽಕಾರಿಗಳಾದ ಸಚಿನ ಪವಾರ, ಜ್ಞಾನೇಶ್ವರ ಚೌಹಾಣ, ಅವಿನಾಶ ಮಾನೆ, ಸಂತೋಷ ಮಾವರ್ಕರ, ವಿಶಾಲ ಕಾಂಬಳೆ, ಯೋಗೇಶ ಕಾಂಬಳೆ, ಯುವರಾಜ ಶೆಟಕೆ, ಯೋಗೇಶ ಪೋತದಾರ, ಎ.ಐ.ಹಲಗಲೆ, ಮೋಹನ ಪಾಟೀಲ, ಅಶೋಕ ಖಾಂಡೇಕರ, ಸಂತೋಷ ಕುರ್ಲೆ, ಮಹಮ್ಮದ್‌ಶಫಿ ಕುನ್ನತೋಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net