ಬೇರೊಂದು ಜೀವ ಉಳಿಸುವ ರಕ್ತದಾನ

ಆನಿಗೋಳ ಗ್ರಾಮದಲ್ಲಿ ವಾಜಪೇಯಿ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಸುನೀಲ ಮರಕುಂಬಿ, ಸುಭಾಸ ತುರಮರಿ, ಗುರುಪಾದ ಕಳ್ಳಿ, ನಾಗೇಶ ಕ್ಕಿರನ್ನವರ ಇತರರಿದ್ದರು.
ಆನಿಗೋಳ ಗ್ರಾಮದಲ್ಲಿ ವಾಜಪೇಯಿ ಜನ್ಮದಿನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಸುನೀಲ ಮರಕುಂಬಿ, ಸುಭಾಸ ತುರಮರಿ, ಗುರುಪಾದ ಕಳ್ಳಿ, ನಾಗೇಶ ಕ್ಕಿರನ್ನವರ ಇತರರಿದ್ದರು.
Published on
ಬೈಲಹೊಂಗಲ: ಸಮೀಪದ ಆನಿಗೋಳ ಗ್ರಾಮದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಮಾ ಭಾರತಿ ಸೇವಾ ಫೌಂಡೇಶನ್ ಹಾಗೂ ಅಭಿಮಾನಿ ಬಳಗದ ವತಿಯಿಂದ ರಕ್ತದಾನ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ ಜರುಗಿತು.
ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು. ಇದರಿಂದ ರೋಗಿಗಳಿಗೆ, ಬಾಣಂತಿಯರಿಗೆ ಅನುಕೂಲವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸುನೀಲ ಮರಕುಂಬಿ ಮಾತನಾಡಿ, ನಮ್ಮ ಬಳಗದಿಂದ ಸಮಾಜಮುಖಿ ಕಾರ್ಯಗಳನ್ನು 13 ವರ್ಷಗಳಿಂದ ಮಾಡುತ್ತ ಬಂದಿದ್ದೇವೆ. ಅಟಲ್ ಜೀ ಜನ್ಮ ದಿನದ ಅಂಗವಾಗಿ 101ಜನ ರಕ್ತದಾನ ಮಾಡಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net