ಐಗಳಿ: ಸ್ಥಳೀಯ ಅಂಕಲಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸವ ಬುಧವಾರ ಸಡಗರದಿಂದ ಜರುಗಿತು. ಬೆಳಗ್ಗೆ ದೇವರಿಗೆ ಪೂಜೆ, ಅಭಿಷೇಕ, ಅನ್ನಪ್ರಸಾದ, ಮಧ್ಯಾಹ್ನ ಡೊಳ್ಳಿನ ವಾಲಗ, ಸಂಜೆ ಪಲ್ಲಕ್ಕಿ ಉತ್ಸವ ಜೈಘೋಷದೊಂದಿಗೆ ಅದ್ದೂರಿಯಾಗಿ ನಡೆಯಿತು. ಜಾತ್ರೆ ನಿಮಿತ್ತ ನಾಲ್ಕು ದಿನಗಳಿಂದ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು, ಬಸರಗಿಯ ಬಸವಯ್ಯ ಸ್ವಾಮೀಜಿ, ಲೋಣಿಯ ಸದಾಶಿವ ಗುರುಗಳು ಪ್ರವಚನ ನೀಡಿದರು.