

ಪ್ರಮುಖ ಮುಖ್ಯಾಂಶಗಳು
ಶೈಕ್ಷಣಿಕ ಪ್ರವಾಸದಿಂದ ಜಾಗತಿಕ ಜ್ಞಾನ ವೃದ್ಧಿ
| ನಿರ್ದೇಶಕಿ ಡಾ.ಸ್ಪೂರ್ತಿ ಅಂಗಡಿ ಪಾಟೀಲ ಅಭಿಪ್ರಾಯ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:
ಅಂತರರಾಷ್ಟ್ರೀಯ ಪ್ರವಾಸದ ಅನುಭವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಜಾಗತಿಕ ಮಟ್ಟದ ಜ್ಞಾನ ವೃದ್ಧಿಸುತ್ತದೆ.ಹಾಗೂ ದೃಷ್ಟಿಕೋನ ವಿಸ್ತರಿಸುವುದರ ಜತಗೆ ನಾಯಕತ್ವ ಗುಣಗಳನ್ನು ಬೆಳೆಸಿ, ಜಾಗತಿಕ ಸ್ಪರ್ಧದಲ್ಲಿ ಯಶಸ್ವಿಯಾಗಲು ಅಗತ್ಯವಾದ ಸಾಮರ್ಥ್ಯ ನೀಡುತ್ತವೆ ಎಂದು ಎಸ್‌ಇಎಫ್‌ನ ನಿರ್ದೇಶಕಿ ಡಾ.ಸ್ಪೂರ್ತಿ ಅಂಗಡಿ ಪಾಟೀಲ ಅಭಿಪ್ರಾಯಪಟ್ಟರು.
ರಾಜ್ಯದ (ಎಸ್‌ಇಇಎಫ್) ಅಂಗಡಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್ ಎಂಬಿಎ ವಿಭಾಗದ ವಿದ್ಯಾರ್ಥಿಗಳು ಈಚೆಗೆ ಹಮ್ಮಿಕೊಂಡಿದ್ದ ಮಲೇಶಿಯಾ ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸದ ಕುರಿತು ಅವರು ಮಾತನಾಡಿದರು.
ಆಡಳಿತಾಧಿಕಾರಿ ರಾಜು ಜೋಶಿ ಮಾತನಾಡಿ ನಿರ್ವಹಣಾ ಶಿಕ್ಷಣ ತರಗತಿಯ ಗೋಡೆಗಳಿಗೆ ಸೀಮಿತವಾಗದೆ, ನಾಲ್ಕು ಜಾಗತಿಕ ಜಾಗತಿಕ ಅನುಭವವನ್ನು ಒದಗಿಸಬೇಕು. ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕತ್ವಕ್ಕೆ ಸಜ್ಜುಗೊಳಿಸುವ ಇಂತಹ ಪರಿವರ್ತನಾತ್ಮಕ ಕಲಿಕಾ ಅವಕಾಶ ಸೃಷ್ಟಿಸಲು ಸಂಸ್ಥೆ ಸದಾ ಬದ್ಧವಾಗಿದೆ ಎಂದು ಮಾಡಿದರು.
ಪ್ರಾಂಶುಪಾಲರು ಹಾಗೂ ನಿರ್ದೇಶಕ ಡಾ.ಆನಂದ ದೇಶಪಾಂಡೆ ಮಾತನಾಡಿ ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸದ ಯಶಸ್ವಿ ಅನುಷ್ಠಾನ ಅನುಭವಾಧಾರಿತ ಮತ್ತು ಸಮಗ್ರ ನಿರ್ವಹಣಾ ಶಿಕ್ಷಣಕ್ಕೆ ನಮ್ಮ ಸಂಸ್ಥೆಯ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ," ಎಂದು ಹೇಳಿದರು
. ವಿಭಾಗದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಡಾ.ಸೂರ್ಯಕುಮಾರ ಖಾನಾಯಿ ಮಾತನಾಡಿ ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸದ ಪ್ರಮುಖ ಉದ್ದೇಶವು ತರಗತಿ ಕಲಿಕೆ ಮತ್ತು ಜಾಗತಿಕ ವ್ಯವಹಾರ ಪದ್ಧತಿಗಳ ಅಂತರ ಕಡಿಮೆ ಮಾಡುವುದಾಗಿದೆ ಎಂದು ಪ್ರವಾಸದ ಅನುಭವ ಹಾಗೂ ಉದ್ದೇಶ ಕಾರ್ಯಕ್ರಮ.
ಏಳು ದಿನಗಳ ಜಾಗತಿಕ ಅಧ್ಯಯನ ಕಾರ್ಯಕ್ರಮದಲ್ಲಿ ಒಟ್ಟು 55 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದ್ದರು.