ಜನರ ಆರೋಗ್ಯ ರಕ್ಷಣೆಗೆ ಸದಾ ಸ್ಪಂದನೆ

ಬೈಲಹೊಂಗಲ ಡಾ.ವಿಶ್ವನಾಥ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳೊಂದಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಸವರಾಜ ಕೊಡ್ಲಿ, ಪ್ರಕಾಶ ಕೊಡೊಳ್ಳಿ, ಉಮೇಶ ಲಾಳ ಇತರರಿದ್ದರು.
ಬೈಲಹೊಂಗಲ ಡಾ.ವಿಶ್ವನಾಥ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳೊಂದಿಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಸವರಾಜ ಕೊಡ್ಲಿ, ಪ್ರಕಾಶ ಕೊಡೊಳ್ಳಿ, ಉಮೇಶ ಲಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಭರವಸೆ
  • ಸಂಗೊಳ್ಳಿಯಲ್ಲಿ ಕಣ್ಣಿನ ತಪಾಸಣೆ ಶಿಬಿರ
ಬೈಲಹೊಂಗಲ:

ಕ್ಷೇತ್ರದ ಜನರ ಆರೋಗ್ಯ ಮತ್ತು ಶ್ರೇಯೋಭಿವೃದ್ಧಿಗೆ ಸೇವೆ ಸದಾ ಲಭ್ಯವಿದ್ದು, ಆರೋಗ್ಯ ಸಮಸ್ಯೆಗಳ ನಿವಾರಣೆಗೆ ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿರುತ್ತೇನೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಸಂಗೊಳ್ಳಿ ಗ್ರಾಮದಲ್ಲಿ ಡಾ.ವಿಶ್ವನಾಥ ಪಾಟೀಲ ಅಭಿಮಾನಿಗಳ ಬಳಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಹಾಗೂ ಕಣ್ಣಿನ ತಪಾಸಣಾ ಉಚಿತ ಶಿಬಿರದ ಅಂಗವಾಗಿ ಆಯ್ಕೆಯಾದ 50 ಮಂದಿಗೆ ಕೆಎಲ್‌ಇ ಆಸ್ಪತ್ರೆಯಲ್ಲಿ ಕಣ್ಣಿನ ಉಚಿತ ಶಸಚಿಕಿತ್ಸೆಗೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ತಲುಪಿಸುವ ಉದ್ದೇಶದಿಂದ ಸೇವಾ ಕಾರ್ಯಕ್ರಮ ಮುಂದುವರಿಸಲಾಗುವುದು. ಶಿಬಿರದಲ್ಲಿ 700ಕ್ಕೂ ಹೆಚ್ಚು ಜನರು ಕಣ್ಣಿನ ತಪಾಸಣೆ ಸೌಲಭ್ಯ ಪಡೆದಿದ್ದು, 80 ಜನರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಇದರಲ್ಲಿ ಮೊದಲ ಹಂತದಲ್ಲಿ 50 ಮಂದಿಗೆ ಶಸಚಿಕಿತ್ಸೆ ಮಾಡಿಸಲಾಗಿದೆ ಎಂದರು.

ಬಸವರಾಜ ಕೊಡ್ಲಿ, ಪ್ರಕಾಶ ಕೊಡೊಳ್ಳಿ,

ಉಮೇಶ ಲಾಳ, ಶೇಖಪ್ಪ

ಅಂಗಡಿ, ಮಲ್ಲಿಕಾರ್ಜುನ ಚನ್ನಕ್ಕನವರ, ಮಲಕಾಜಪ್ಪ ಕೊಡೊಳ್ಳಿ, ಪರಪ್ಪ ಗಣಾಚಾರಿ, ಚಂದ್ರುಗೌಡ ಪಾಟೀಲ, ರಾಯಪ್ಪ ಹೆಗಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net