ಅನ್ನದಾತರ ಪರ ಹೋರಾಟಕ್ಕೆ ಸದಾ ಬದ್ಧ

ಅಕ್ಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಮೇಶ ಕತ್ತಿ,  ಉತ್ತಮ ಪಾಟೀಲ, ಲಕ್ಷ್ಮಣ ಚಿಂಗಳೆ ಸುಭಾಸ ಜೋಶಿ ಇತರರಿದ್ದರು.
ಅಕ್ಕೋಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಮೇಶ ಕತ್ತಿ, ಉತ್ತಮ ಪಾಟೀಲ, ಲಕ್ಷ್ಮಣ ಚಿಂಗಳೆ ಸುಭಾಸ ಜೋಶಿ ಇತರರಿದ್ದರು.
Published on
ಬೋರಗಾಂವ: ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಗಡಿ ಕಾಯುವ ಸೈನಿಕರನ್ನು ಎಲ್ಲರೂ ಗೌರವಿಸಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ಅಕ್ಕೋಳ ಗ್ರಾಮದಲ್ಲಿ 102 ವರ್ಷ ಪೂರೈಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಕೇಂದ್ರ ಬ್ಯಾಂಕ್‌ನಿಂದ ನಿಪ್ಪಾಣಿ ತಾಲೂಕಿನ ಕೆಲ ಪಿಕೆಪಿಎಸ್ ಸಂಘಗಳಿಗೆ ಕ್ರಮದ ಪತ್ತು ನೀಡಲು ಹಿಂದೇಟು ಹಾಕುತ್ತಿರುವುದು ಬೇಸರವಾಗಿದೆ. ಯುವ ನಾಯಕ ಉತ್ತಮ ಪಾಟೀಲ ಅವರು ರೈತರಿಗೆ ನ್ಯಾಯ ನೀಡಲು ಪ್ರಯತ್ನಿಸುತ್ತಿದ್ದು ಸಹಕಾರ, ರೈತರ ವಿಷಯ ಬಂದರೆ ನಮ್ಮ ಬೆಂಬಲ ಸದಾಕಾಲ ಇದೆ ಎಂದರು.
ಯುವ ನಾಯಕ ಉತ್ತಮ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಸಹಕಾರ ಸಂಘ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಸಹಕಾರ ರಂಗವನ್ನು ಅಭಿವೃದ್ಧಿಗೊಳಿಸಲು ಹಿರಿಯ ಧುರೀಣ ದಿ.ರಾವಸಾಹೇಬ ಪಾಟೀಲ, ಡಿ.ಟಿ.ಪಾಟೀಲ, ರಮೇಶ ಕತ್ತಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ನಿಪ್ಪಾಣಿ ತಾಲೂಕಿನ ರೈತರು ಕ್ರಮದ ಪತ್ತು ಸಿಗದೆ ಸಂಕಷ್ಟದಲ್ಲಿದ್ದಾರೆ. ಇವರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮಾತನಾಡಿ, ರೈತರು ಮತ್ತು ಸಹಕಾರ ಸಂಘಗಳಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಬರುವ ಯೋಜನೆ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಾಜಿ ಶಾಸಕ ಸುಭಾಸ ಜೋಶಿ, ಬಾಬಾ ಪಾಟೀಲ, ಗ್ರಾಪಂ ಅಧ್ಯಕ್ಷ ಇಂದ್ರಜಿತ ಸಾಳಂಕುರೆ, ಉಪಾಧ್ಯಕ್ಷೆ ಶಾರದಾ ಕೋಳಿ, ರಾಜು ಪಾಟೀಲ, ಬಸವರಾಜ ಪಾಟೀಲ, ಅರುಣ ನಿಕಾಡೆ, ಯುವರಾಜ ಪಾಟೀಲ, ಧೀರಜ ಪಾಟೀಲ, ನಿರಂಜನ ಪಾಟೀಲ, ಸಂಘದ ಅಧ್ಯಕ್ಷ ಪದ್ಮರಾಜ ಪಾಟೀಲ, ಉಪಾಧ್ಯಕ್ಷೆ ನಿರ್ಮಲಾ ಭೂಯಿ, ವಿವೇಕಾನಂದ ಸೋಲಂಕುರೆ, ಚೇತನ ಸ್ವಾಮಿ, ಸುಂದರ ಪಾಟೀಲ, ವಿಜಯ ಸದಲಗೆ, ರಮೇಶ ಭಿವಸೆ, ಅನಿಲ ಕೋಳಿ, ಭೂಪಾಲ ಮೇತ್ರಿ, ಪ್ರದೀಪ ಉಪಾಧ್ಯೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net