ಬೆಳಗಾವಿಯಲ್ಲಿ ನಡೆಯುತ್ತಿರುವ ಅರ್ಚಕರ ತರಬೇತಿ ಶಿಬಿರದಲ್ಲಿ ಭಾನುವಾರ ಚಂದ್ರಶೇಖರ ಶಿವಾಚಾರ್ಯ, ನಿರಂಜನ ಸ್ವಾಮೀಜಿ, ನಿಜಲಿಂಗೇಶ್ವರ ಸ್ವಾಮೀಜಿ, ಡಾ.ಪವಾಡ ಬಸವೇಶ್ವರ ಸ್ವಾಮೀಜಿ ಇತರರು ಪಾಲ್ಗೊಂಡಿದ್ದರು.
Published on:
Copied
Follow Us
ಬೆಳಗಾವಿ : ಸನಾತನ ಹಿಂದೂ ಧರ್ಮದ ಬಗ್ಗೆ ಎಲ್ಲ ಅರ್ಚಕರು ತಿಳಿದುಕೊಂಡು ಸಮಾಜ ಸೇವೆ ಮಾಡಬೇಕು. ಹಿಂದೂಗಳು ಒಟ್ಟಾಗಿ ಕಾರ್ಯ ಮಾಡಿದರೆ ದೇಶ ಸುಭದ್ರವಾಗಿರಲು ಸಾಧ್ಯವಾಗುತ್ತದೆ. ದೇವಸ್ಥಾನಗಳಲ್ಲಿ ಮನುಷ್ಯನ ಮನಸ್ಥಿತಿ ತಿಳಿಗೊಳಿಸುವ ಶಕ್ತಿ ಇದೆ. ಈ ನಿಟ್ಟಿನಲ್ಲಿ ಅರ್ಚಕರು ದೇವಸ್ಥಾನದ ಪೂಜೆಯ ಜತೆಗೆ ದೇಶದ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಉಪಾಧ್ಯಕ್ಷ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಹೇಳಿದರು.
ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜನ ಕಲ್ಯಾಣ ಪ್ರತಿಷ್ಠಾನದಲ್ಲಿ ದೇವಾಲಯ ಸಂವರ್ಧನಾ ಸಮಿತಿಯಿಂದ ಏರ್ಪಡಿಸಿರುವ ಅರ್ಚಕರ ತರಬೇತಿ ಶಿಬಿರದಲ್ಲಿ ಭಾನುವಾರ ಮಾತನಾಡಿದ ಅವರು, ದೇವಸ್ಥಾನದ ಅರ್ಚಕರು ಸಮಯಕ್ಕೆ ಹೆಚ್ಚು ಒತ್ತು ನೀಡಿ ದೇವಸ್ಥಾನದ ಪೂಜೆ ಪುನಸ್ಕಾರ ಮಾಡಬೇಕು ಎಂದರು.
ಇಸ್ಕಾನ್‌ನ ನಿರಂಜನ ಸ್ವಾಮೀಜಿ ಮಾತನಾಡಿ, ಸನಾತನ ಧರ್ಮ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಲು ಅರ್ಚಕರ ತರಬೇತಿ ಶಿಬಿರಗಳು ಆಯೋಜಿಸುವುದು ಅತ್ಯವಶ್ಯಕವಾಗಿದೆ. ಅರ್ಚಕರಾಗುವವರು ಬಹಳ ಕಡಿಮೆ ಆಗಿದ್ದಾರೆ. ಹೀಗಾಗಿ, ಎಲ್ಲ ಸ್ವಾಮೀಜಿಗಳ ನೇತೃತ್ವದಲ್ಲಿ ಅರ್ಚಕರನ್ನು ಬೆಳೆಸುವ ಕೆಲಸ ನಿರಂತರವಾಗಿ ಮಾಡಬೇಕು. ಭಗವಂತ ಸೇವೆ ಮಾಡಿದರೆ ನಮ್ಮ ಅಂತಃಕರಣ ಶುದ್ಧಿಯಾಗಿರುತ್ತದೆ ಎಂದು ಹೇಳಿದರು.
ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಅಧ್ಯಕ್ಷ ಮನೋಹರ ಮಠದ, ಅರ್ಚಕ ಬಸವರಾಜ ನೇಸರಗಿ ಶಿಬಿರದ ಕುರಿತು ಮಾತನಾಡಿದರು.