ಸೈನಿಕರಿಗೆ ದೈಹಿಕ ಸದೃಢತೆ ಜತೆಗೆ ದೃಷ್ಟಿಯೂ ಮುಖ್ಯ

ಬೆಳಗಾವಿಯ ನಂದಾದೀಪ ನೇತ್ರಾಲಯದಿಂದ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಉದ್ಘಾಟನೆಯಲ್ಲಿ ನಿವೃತ್ತ ಎನ್‌ಎಸ್‌ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಸುರೇಶ ಸನದಿಯವರನ್ನು ಸತ್ಕರಿಸಲಾಯಿತು.
ಬೆಳಗಾವಿಯ ನಂದಾದೀಪ ನೇತ್ರಾಲಯದಿಂದ ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಉದ್ಘಾಟನೆಯಲ್ಲಿ ನಿವೃತ್ತ ಎನ್‌ಎಸ್‌ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಸುರೇಶ ಸನದಿಯವರನ್ನು ಸತ್ಕರಿಸಲಾಯಿತು.
Published on
ಬೆಳಗಾವಿ: ಸೈನ್ಯದಲ್ಲಿರುವವರಿಗೆ ದೈಹಿಕ ಸದೃಢತೆಯ ಜತೆಗೆ ಕಣ್ಣಿನ ಪರಿಪೂರ್ಣ ದೃಷ್ಟಿಯೂ ಮುಖ್ಯವಾಗಿರುತ್ತದೆ. ಹೀಗಾಗಿ ಸೈನ್ಯಕ್ಕೆ ಸೇರುವ ಗುರಿವುಳ್ಳವರು ತಮ್ಮ ಕಣ್ಣುಗಳ ಆರೈಕೆಗೂ ಮಹತ್ವ ಕೊಡಬೇಕು ಎಂದು ನಿವೃತ್ತ ಎನ್‌ಎಸ್‌ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಸುರೇಶ ಸನದಿ ಹೇಳಿದರು.
ನಗರದ ನಂದಾದೀಪ ನೇತ್ರಾಲಯವು ಪೀರನವಾಡಿಯ ಶ್ರೀ ಮಹಾಲಕ್ಷ್ಮೀ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯ ಅಭ್ಯರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಉದ್ಘಾಟನೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದ ಅವರು, ತಮ್ಮ ವೃತ್ತಿ ಜೀವನದ ಪ್ರಮುಖ ಘಟನಾವಳಿಗಳನ್ನು ಮೆಲುಕು ಹಾಕಿದರು.
ನಂದಾದೀಪ ನೇತ್ರಾಲಯದ ನಿರ್ದೇಶಕಿ ಡಾ. ನಿಧಿ ಪಟವರ್ಧನ್ ಮಾತನಾಡಿ, ಸಶಸ್ತ್ರ ಪಡೆಗಳಲ್ಲಿ ಭವಿಷ್ಯದ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಅಗತ್ಯವಿರುವ ಉತ್ತಮ ದೃಷ್ಟಿ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ನಮ್ಮ ಆಸ್ಪತ್ರೆ ಈಚೆಗೆ ತಾಂತ್ರಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸುರಕ್ಷತೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುವ ಬ್ಲೇಡ್‌ಲೆಸ್ ತಂತ್ರಜ್ಞಾನ ಸೇರಿದಂತೆ ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸಾ ಮೂಲಸೌಕರ್ಯಗಳಲ್ಲಿ ಸಾಕಷ್ಟು ಅಪ್‌ಡೇಟ್ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಅಕಾಡೆಮಿಯ ಒಟ್ಟು 80 ಅಭ್ಯರ್ಥಿಗಳನ್ನು ಡಾ.ಸೌರವ ಪಾಟೀಲ ಮತ್ತು ಡಾ.ಎ.ಆರ್.ಪರಾಯ್ ನೇತೃತ್ವದ ತಂಡವು ಸಮಗ್ರ ಕಣ್ಣಿನ ತಪಾಸಣೆಗೊಳಪಡಿಸಿತು. ನಂದಾದೀಪ ನೇತ್ರಾಲಯದ ನರ್ಸಿಂಗ್ ಮತ್ತು ತಾಂತ್ರಿಕ ಸಿಬ್ಬಂದಿ ಸಹಕರಿಸಿದರು. ನೇತ್ರಾಲಯದ ಆಡಳಿತಾಧಿಕಾರಿ ಆನಂದ ತುಪ್ಪದ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net