ಶಿಕ್ಷಣ ಜತೆಗೆ ಸಂಸ್ಕಾರ ಅಗತ್ಯ

ಚಿಕ್ಕುಂಬಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮವನ್ನು ಶಿವಲೀಲಾ ವಂಟಮೂರಿ ಉದ್ಘಾಟಿಸಿದರು. ಡಾ.ಗೀತಾ ಸೋಡಿ, ಸುಬ್ರಾಯ ನಾಯಕ, ವನಜಾಕ್ಷಿ ಸಾಲಿಮಠ ಇತರರಿದ್ದರು.
ಚಿಕ್ಕುಂಬಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮವನ್ನು ಶಿವಲೀಲಾ ವಂಟಮೂರಿ ಉದ್ಘಾಟಿಸಿದರು. ಡಾ.ಗೀತಾ ಸೋಡಿ, ಸುಬ್ರಾಯ ನಾಯಕ, ವನಜಾಕ್ಷಿ ಸಾಲಿಮಠ ಇತರರಿದ್ದರು.
Published on
ಉಗರಗೋಳ: ಯುವಕರು ದುಶ್ಚಟಕ್ಕೆ ಬಲಿಯಾಗದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಆರ್.ಲವಕುಮಾರ ಹೇಳಿದರು.
ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಒಳ್ಳೆಯ ಹವ್ಯಾಸ ಬೆಳೆಸಿ, ಕಲಿಸಿ ಕೊಡುವಲ್ಲಿ ಹೆತ್ತವರ ಪಾತ್ರ ಮುಖ್ಯವಾಗಿರುತ್ತದೆ ಎಂದರು.
ಡಾ.ಗೀತಾ ಸೋಡಿ ಮಾತನಾಡಿ. ತಂಬಾಕು ಸೇವನೆಯಿಂದ ಆರೋಗ್ಯದಲ್ಲಿ ಆಗುವ ದುಷ್ಟರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಿ, ಮಕ್ಕಳು ದುಶ್ಚಟಗಳ ದಾಸರಾಗದೆ ವಿದ್ಯೆ ಕಲಿತು ಸಮಾಜದ ಕಣ್ಣುಗಳಾಗಬೇಕು ಎಂದರು. ತಾಲೂಕಾ ಯೋಜನಾಧಿಕಾರಿ ಸುಬ್ರಾಯ ನಾಯಕ, ಶಿವಲೀಲಾ ವಂಟಮೂರಿ, ವನಜಾಕ್ಷಿ ಸಾಲಿಮಠ, ಮಂಜುಳಾ ಹಿರೇಮಠ, ಪವಿತ್ರಾ ಬಡ್ಲಿ, ಮುಮ್ತಾಜ್ ಅತ್ತಾರ್, ಶಕುಂತಲಾ ಅಬ್ಬಿಗೇರಿ, ಸಾವಕ್ಕ ಬಾರ್ಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net