ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ವಿಶಾಲ ಹಿಂದೂ ಸಮ್ಮೇಳನದಲ್ಲಿ ಶಿವಾನಂದ ಸ್ವಾಮೀಜಿ ಅವರನ್ನು ನಿಖಿಲ ಕತ್ತಿ, ಪವನ ಕತ್ತಿ ಸನ್ಮಾನಿಸಿದರು. ಅರುಣಕುಮಾರ ಜಿ ಇದ್ದರು.
ಹುಕ್ಕೇರಿ:ದ್ವೇಷ, ಅಸೂಯೆ, ಅಸ್ಪಶ್ಯತೆ, ಜಾತಿ ಭೇದ ಬಿಟ್ಟು ಬದುಕುವುದನ್ನು ಜನ ಸಾಮಾನ್ಯರಿಗೆ ತಿಳಿಸುವುದೇ ವಿಶಾಲ ಹಿಂದೂ ಸಮ್ಮೇಳನ ಸಮಾರಂಭದ ಉದ್ದೇಶ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರಕ ಮುಖ್ಯಸ್ಥ ಅರುಣಕುಮಾರ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ವಿಶಾಲ ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶಾಲ ಹಿಂದೂ ಸಮ್ಮೇಳನದಲ್ಲಿ ಮಾತನಾಡಿ, ೩೩ ಕೋಟಿ ದೇವರನ್ನು ಪೂಜಿಸುವ ನಾವು ಪಾಶ್ಚಿಮಾತ್ಯರ ಎರಡು ದೇವರು ಪೂಜಿಸುವುದನ್ನು ವಿರೋಽಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ನಮ್ಮಲ್ಲಿ ಚಿಕ್ಕ ಪುಟ್ಟ ಗೊಂದಲಗಳಿರಬಹುದು. ಆದರೆ, ದ್ವೇಷರಹಿತ ಜೀವನ ಹೊಂದಿದ್ದೇವೆ ಎಂದರು.
ಹಿಂದೂಗಳೆಂದರೆ ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ದೇಶವನ್ನು ಪ್ರೀತಿಸುವವರೆಲ್ಲರೂ ಹಿಂದೂಗಳು. ದೇಶದ ಎಲ್ಲ ಧರ್ಮೀಯರು ಸೌಹಾರ್ದದಿಂದ ಬದುಕುತ್ತಿದ್ದೇವೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶ ಜಗತ್ತಿಗೆ ಮಾದರಿಯಾಗಿದೆ. ಕಾರಣ ದೇಶ ಜಗತ್ತಿಗೆ ಮಾದರಿಯಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಹುಕ್ಕೇರಿ ತಾಲೂಕಿನಲ್ಲಿ ಕೋಮು ಸೌಹಾರ್ದ ಕಾಪಾಡಿಕೊಂಡು ಬಂದ ಹೆಗ್ಗಳಿಕೆ ಕತ್ತಿ ಕುಟುಂಬಕ್ಕೆ ಸಲ್ಲುತ್ತದೆ ಎಂದರು. ಗೋ ಪೂಜೆ, ಧ್ವಜಾರೋಹಣದ ಮೂಲಕ ಶೋಭಾಯಾತ್ರೆ ಜರುಗಿತು.
ಶಾಸಕ ನಿಖಿಲ ಕತ್ತಿ ಅಧ್ಯಕ್ಷತೆ ವಹಿಸಿದ್ದರು. ಪೃಥ್ವಿ ಕತ್ತಿ, ವಕೀಲರಾದ ರಾಮಚಂದ್ರ ಜೋಶಿ, ಪ್ರಕಾಶ ಮುತಾಲಿಕ ಇತರರು ಇದ್ದರು.
"
ಹೋಬಳಿ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವುದರಿಂದ ಏಕತೆ ಮತ್ತು ದೇಶಾಭಿಮಾನ ಬೆಳೆಯುತ್ತದೆ.