ಬದುಕಿಗೆ ಬೆಳಕು ಮದ್ಯವರ್ಜನ ಶಿಬಿರ

ಮುರಗೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನವಜೀವನ ಸದಸ್ಯರ ಮಾಸಿಕ ಸಭೆಯನ್ನು ಭಾಸ್ಕರ್ ಎನ್. ಉದ್ಘಾಟಿಸಿದರು. ಶ್ರೀಕಾಂತ ಎಂ., ಮಹಾಂತೇಶ ಅಳಾಜ್, ಮಂಜುಳಾ ಡಿ.ಇತರರಿದ್ದರು.
ಮುರಗೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನವಜೀವನ ಸದಸ್ಯರ ಮಾಸಿಕ ಸಭೆಯನ್ನು ಭಾಸ್ಕರ್ ಎನ್. ಉದ್ಘಾಟಿಸಿದರು. ಶ್ರೀಕಾಂತ ಎಂ., ಮಹಾಂತೇಶ ಅಳಾಜ್, ಮಂಜುಳಾ ಡಿ.ಇತರರಿದ್ದರು.
Published on
ಮುರಗೋಡ: ದುಶ್ಚಟಗಳಿಂದ ದೂರವಾದಾಗ ಮಾತ್ರ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಹೊಂದಲು ಸಾಧ್ಯವಾಗುತ್ತದೆ. ಕತ್ತಲೆ ಕವಿದ ಬದುಕಿಗೆ ಮದ್ಯವರ್ಜನ ಶಿಬಿರ ಬೆಳಕಾಗುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆ ಧಾರವಾಡ ಪ್ರಾದೇಶಿಕ ನಿರ್ದೇಶಕ ಭಾಸ್ಕರ್ ಎನ್. ಹೇಳಿದರು.
ಮಹಾಂತ ದುರದುಂಡೀಶ್ವರ ಮಠದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶನಿವಾರ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು ಮಟ್ಟದ ನವಜೀವನ ಸದಸ್ಯರ ಮಾಸಿಕ ಸಭೆಯಲ್ಲಿ ಮಾತನಾಡಿ, ಸಂಪಾದನೆ ಹಾಗೂ ಕುಟುಂಬದ ಏಳಿಗೆಗೆ ಒತ್ತು ನೀಡುವ ಮೂಲಕ ಸಮಾಜದಲ್ಲಿ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲೂಕು ಯೋಜನಾಧಿಕಾರಿ ಶ್ರೀಕಾಂತ ಎಂ. ಮಾತನಾಡಿದರು. ಮಹಾಂತೇಶ ಹದ್ರಶೆಟ್ಟಿ, ಮಂಜುನಾಥ ಕಾಜಗಾರ ಮಾತನಾಡಿದರು. ಪತ್ರಕರ್ತ ಮಹಾಂತೇಶ ಬಾಳಿಕಾಯಿ, ಬಸವರಾಜ ಅಕ್ಕಿಸಾಗರ, ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮೀ ನರಗುಂದ, ಲಕ್ಷ್ಮೀ ಗುಡಸೆ, ಮಂಜುಳಾ.ಡಿ., ಪ್ರಶಾಂತ ರಗಟ್ಟಿ, ಮೀನಾಕ್ಷಿ ಹೊಗಾರ, ಕಾವ್ಯಾ ಕುಂಬಾರ, ಭಾರತಿ ಹೂಗಾರ, ಶಹನಾಜ ನದ್ಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net