

ಬೆಳಗಾವಿಯಿಂದ ಮುಂಬೈಗೆ ನೇರ ವಿಮಾನ ಸೇವೆ ಆರಂಭಿಸುವಂತೆ ಈಗಾಗಲೇ ಸ್ಟಾರ್ ಏರ್‌ಲೈನ್ಸ್ ಮತ್ತು ಇಂಡಿಗೋ ಕಂಪನಿಗೆ ಪತ್ರ ಬರೆದಿದ್ದು, ಅವರ ಪತ್ರಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಸಕರಾತ್ಮಕವಾಗಿ ಸ್ಪಂದಿಸಿ ಪುನಃ ಸೇವೆ ಆರಂಭಿಸುವ ನಿರೀಕ್ಷೆಯಿದೆ.
ವಿಮಾನಯಾನ ಸೇವೆ ರದ್ದುಗೊಳಿಸಿದ್ದರಿಂದ ವ್ಯಾಪಾರ ವಲಯ ಸಂಕಷ್ಟಕ್ಕೆ ಸಿಲುಕಿದೆ. 10 ಸಾವಿರಕ್ಕೂ ಅಧಿಕ ಉದ್ಯೋಗ ಕಡಿತಗೊಳ್ಳುವ ಅಪಾಯವಿದೆ. ಉದ್ಯಮಿಗಳು ತಮ್ಮ ವ್ಯವಹಾರಗಳನ್ನು ಕೊಲ್ಲಾಪುರ ಸೇರಿ ವಿವಿಧೆಡೆ ಸ್ಥಳಾಂತರಿಸಬಹುದು. ಆದ್ದರಿಂದ ಸ್ಥಗಿತಗೊಂಡಿರುವ ಸೇವೆಗಳು ಪುನರಾರಂಭಿಸಬೇಕು.