ಉದ್ಯೋಗ ಕೌಶಲ್ಯ ತರಬೇತಿಗೆ ‘ಎಐ‘ ರೆಕ್ಕೆ!

 ಬೆಳಗಾವಿ ನಗರದ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಯುವಕ, ಯುವತಿಯರು ಕೋರ್ಸ್‌ಗಳ ಕಲಿಯುತ್ತಿದ್ದಾರೆ.
ಬೆಳಗಾವಿ ನಗರದ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಯುವಕ, ಯುವತಿಯರು ಕೋರ್ಸ್‌ಗಳ ಕಲಿಯುತ್ತಿದ್ದಾರೆ.
Published on
ಬೆಳಗಾವಿ
ನಗರ, ಗ್ರಾಮೀಣ ಭಾಗದ ಯುವ ಸಮುದಾಯಕ್ಕೆ ಸ್ವ ಉದ್ಯಮ ಸ್ಥಾಪನೆಗೆ ಉತ್ತೇಜನ, ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಗೆ ಕೃತಕ ಬುದ್ಧಿಮತ್ತೆ (ಎಐ) ರೆಕ್ಕೆ ಕಲ್ಪಿಸಿದೆ!
ಹೌದು. ಕೇಂದ್ರ, ರಾಜ್ಯ ಸರ್ಕಾರವು ಯುವಕರಿಗೆ ಉದ್ಯೋಗ ಸಂಬಂಧಿತ ಕೌಶಲ್ಯ ತರಬೇತಿಯನ್ನು ನೀಡಿ ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಮತ್ತು ಉತ್ತಮ ಜೀವನೋಪಾಯವನ್ನು ಒದಗಿಸಲು ಅನುಷ್ಠಾನಗೊಳಿಸಿರುವ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ ( ಪಿಎಂಕೆವಿವಾಯ್) ಹಾಗೂ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ರೊಬೊಟೆಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ತ್ರಿಡಿ ಪ್ರಿಂಟಿಂಗ್, ಕೋಡಿಂಗ್‌ನ ನಂತಹ ಹೊಸ ಪೀಳಿಗೆಯ ಕೋರ್ಸ್‌ಗಳ ಬೇಡಿಕೆ ಹೆಚ್ಚುತ್ತಿದೆ.
ಈಗಾಗಲೇ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಜಿಲ್ಲೆಯ್ಯದ್ಯಂತ ವಿಶ್ವಕರ್ಮ, ಡಿಡಿಯು-ಜಿಕೆವೈ, ಪಿಎಂ ವಿಶ್ವಕರ್ಮ ಸೇರಿವಿಧ ಕೌಶಲ್ಯಾಭಿವೃದ್ಧಿ ಯೋಜನೆಗಳಡಿ ಕಟೀಂಗ್, ಟೈಲರ್, ದೋಬಿ, ಪೋಟೋಗ್ರಾಪರ್ ಹೀಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಗೆ 21ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ನೋಂದಾಯಿಸಿಕೊಂಡು ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪೂರ್ಣಗೊಳಿಸಿದ 15ಸಾವಿರ ಅಭ್ಯರ್ಥಿಗಳ ಮೌಲ್ಯಮಾಪನ ನಡೆಸಿ ಪ್ರಮಾಣಪತ್ರ ಪಡೆದುಕೊಂಡು ಖಾಸಗಿ ಸಂಸ್ಥೆಗಳು ಹಾಗೂ ಸ್ವಯಂ ಉದ್ಯೋಗ ಕ್ಷೇತ್ರದಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಇದೀಗ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯು ಐಟಿ ಬಿಟಿ, ತಂತ್ರಜ್ಞಾನ ಆಧಾರಿತ ಕಂಪನಿಗಳು, ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಡ್ರೋನ್, ತಂತ್ರಜ್ಞಾನ, ಇಂಟರ್ನೆಟ್ ಆಫ್ ಥಿಂಗ್ಸ್, ರೊಬೊಟಿಕ್ಸನಂತಹ ಭವಿಷ್ಯದ ಕೇಂದ್ರಿತ ಕ್ಷೇತ್ರಗಳಲ್ಲಿಯೂ ತರಬೇತಿ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
..................
ಬಾಕ್ಸ್
3ವರ್ಷದಿಂದ ಅನುದಾನ ಇಲ್ಲ
ರಾಜ್ಯ ಸರ್ಕಾರವು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಗೆ ಮೂರು ವರ್ಷಗಳಿಂದ ಅನುದಾನದ ಬಿಡುಗಡೆ ಮಾಡಿಲ್ಲ. ಹೀಗಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ವಿವಿಧ ಇಲಾಖೆಗಳ ಮೂಲಕ ಕೌಶಲ್ಯ ತರಬೇತಿಗಳನ್ನು ನಡೆಸುತ್ತಿದೆ. ಕೆಲ ಭಾಗದಲ್ಲಿ ಈ ಯೋಜನೆ ಸಂಪೂರ್ಣ ಬಂದ್ ಆಗಿದೆ.
..........
ಬಾಕ್ಸ್
ಜಿಲ್ಲೆಯಲ್ಲಿ 34 ಉದ್ಯೋಗ ಮೇಳ ಆಯೋಜನೆ
ಬೆಳಗಾವಿ ಜಿಲ್ಲೆಯ್ಯದ್ಯಂತ 2025-26 ಮತ್ತು 2026-27ನೇ ಸಾಲಿನ ಅವಧಿಯಲ್ಲಿ ಹಮ್ಮಿಕೊಂಡಿದ್ದ ಒಟ್ಟು 34 ಉದ್ಯೋಗ ಮೇಳದಲ್ಲಿ 350ಕ್ಕೂ ಅಧಿಕ ಐಟಿ, ಬಿಟಿ, ಕೈಗಾರಿಕೆಗಳು ಸೇರಿ ವಿವಿಧ ಕಂಪನಿಗಳು ಭಾಗವಹಿಸಿದ್ದ 18,450 ಉದ್ಯೋಗಾಂಕ್ಷಿಗಳು ಪೈಕಿ 2,540 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿದ್ದರು. ಅದರಲ್ಲಿ 414 ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಮೇಳದಲ್ಲಿ ಭಾಗವಹಿಸಿದ್ದ ಪದವಿ, ಪಿಯುಸಿ, ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಆಧಾರಿತ ಕೌಶಲ್ಯ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರವು ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡುತ್ತಿದ್ದು, ಉದ್ಯೋಗಾಂಕ್ಷಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯು ಉಪನಿರ್ದೇಶಕ ಪ್ರಕಾಶ ದೇಶಪಾಂಡೆ ತಿಳಿಸಿದ್ದಾರೆ.
............................
ಬಾಕ್ಸ್
ಜಿಲ್ಲೆಯಲ್ಲಿ ಕೌಶಲ್ಯ ತರಬೇತಿ ಪಡೆದವರ ವಿವರ
ವರ್ಷ ನೋಂದಾಯಿತ ತರಬೇತಿಗೆ ಹಾಜರು ಪೂರ್ಣಗೊಳಿಸಿದವರು
2023 4,548 4,368 3,664
2024 19,350 18,991 16,399
2025 2,196 2063 1862
ಒಟ್ಟು 26,274 25,422 21,925
..............................
ಕೋಟ್ಸ್
ಗ್ರಾಮೀಣ ಭಾಗದಲ್ಲಿರುವ ಯುವ ಸಮುದಾಯ ಗಮನದಲ್ಲಿಟ್ಟುಕೊಂಡು ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯಲ್ಲಿ ಎಐ, ರೊಬೊಟೆಕ್ಸ್, ಇಂಟರ್ನೆಟ್ ಆಧಾರಿತ ಕೋರ್ಸ್‌ಗಳ ಆರಂಭಿಸಲು ನಿರ್ದೇಶನ ನೀಡಿದ್ದೇವೆ. ಹಳ್ಳಿಗಳಲ್ಲಿ ಕೂಡ ಈ ಕೋರ್ಸ್‌ಗಳ ತರಬೇತಿ ಸೌಲಭ್ಯ ಸಿಗುವಂತೆ ಕ್ರಮ ವಹಿಸಲಾಗುವುದು.
-ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
......
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net