

ಅಪರಾಧಿಗಳ ಮೇಲೂ ಕಣ್ಣುಎಐ ತಂತ್ರಜ್ಞಾನ ಆಧಾರಿತ ಸಿಸಿ ಕ್ಯಾಮರಾಗಳು ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಣಿಡುವುದರ ಜತೆಗೆ ಅಪರಾಧ ಚಟುವಟಿಕೆಗಳ ಮೇಲೂ ನಿಗಾ ಇಡಲಿವೆ. ಕಳ್ಳರ ಚಲನವಲನ, ಅಪರಾಧ ಹಿನ್ನೆಲೆಯುಳ್ಳವರು ತಪ್ಪಿಸಿಕೊಳ್ಳುವ ವೇಳೆಯಲ್ಲಿ ನಿಗಾ ಇಟ್ಟು ಮಾಹಿತಿ ರವಾನಿಸಲಿವೆ. ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ ಅನ್ಯ ರಾಜ್ಯದ ಕಳ್ಳರು ಆಗಾಗ ಜಿಲ್ಲೆಯೊಳಗೆ ಬಂದು ಕಳವು ಮಾಡಿ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಆಯಕಟ್ಟಿನ ಜಾಗಗಳಲ್ಲೂ ಎಐ ಕ್ಯಾಮರಾಗಳು ಹದ್ದಿನ ಕಣ್ಣಿಡಲಿವೆ. ಇದಕ್ಕಾಗಿ ಎಸ್ಪಿ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ.
| ಅಪಘಾತಗಳ ಮಾಹಿತಿ | 2025 | 2026 (ಜೂ.8ರವರೆಗೆ) |
|---|---|---|
| ಭೀಕರ ಅಪಘಾತ | 759 | 353 |
| ಸಾಮಾನ್ಯ ಅಪಘಾತ | 1,293 | 664 |
| ಒಟ್ಟು ಅಪಘಾತ | 2,052 | 1,017 |
| ಸಾವು | 805 | 367 |
| ಗಾಯಾಳುಗಳು | 3,058 | 1,337 |