ಎಐನಿಂದ ಭವಿಷ್ಯದಲ್ಲಿ ಉದ್ಯೋಗಕ್ಕೆ ಕುತ್ತು ಸಾಧ್ಯತೆ

ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿಪೂರ್ವ ಅಂತರ ಕಾಲೇಜು ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಡಾ.ಜಿ.ಸುಬರ್ಣರಾಯ ಉದ್ಘಾಟಿಸಿದರು. ಮಹಾಂತೇಶ ಕವಟಗಿಮಠ, ಲಿಂಗೌಡ ದೇಸಾಯಿ, ಡಾ.ಜ್ಯೋತಿ ಕವಳೇಕರ, ವಿ.ಕೆ.ಗಾಣಿಗೇರ ಇತರರಿದ್ದರು.
ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದವಿಪೂರ್ವ ಅಂತರ ಕಾಲೇಜು ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮವನ್ನು ಡಾ.ಜಿ.ಸುಬರ್ಣರಾಯ ಉದ್ಘಾಟಿಸಿದರು. ಮಹಾಂತೇಶ ಕವಟಗಿಮಠ, ಲಿಂಗೌಡ ದೇಸಾಯಿ, ಡಾ.ಜ್ಯೋತಿ ಕವಳೇಕರ, ವಿ.ಕೆ.ಗಾಣಿಗೇರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ.ಪೂ ಅಂತರ ಕಾಲೇಜು ವಿಜ್ಞಾನ, ಸಾಂಸ್ಕೃತಿಕ ಹಬ್ಬ
  • ಮಹಾಂತೇಶ ಕವಟಗಿಮಠ ಆತಂಕ
ಬೆಳಗಾವಿ: ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಇಂದು ಸಾಮಾನ್ಯ ವ್ಯಕ್ತಿಯೊಬ್ಬ ವಿಶ್ವಮಟ್ಟದಲ್ಲಿ ವ್ಯಾಪಾರ ವಹಿವಾಟು ನಡೆಸುವಂತಾಗಿದೆ. ಕೃತಕ ಬುದ್ಧಿಮತ್ತೆ ಪರಿಣಾಮ ಭವಿಷ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ಕಂಡುಬರುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು.

ನಗರದ ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪದವಿಪೂರ್ವ ಅಂತರ ಕಾಲೇಜು ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನ ಮಾನವ ಸಮಾಜಕ್ಕೆ ಹಲವಾರು ಕೊಡುಗೆ ನೀಡಿದೆ. ಆದರೆ, ಕೆಲ ವಿಷಯಗಳಲ್ಲಿ ಶಾಪವೂ ಆಗಿದೆ. ಮೂಲ ವಿಜ್ಞಾನ ಅಧ್ಯಯನಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ದೊರೆಯಲಿದೆ. ಮೂಲ ವಿಜ್ಞಾನವೇ ಎಲ್ಲ ಹೊಸ ಆವಿಷ್ಕಾರಗಳ ತಳಹದಿಯಾಗಿದೆ ಎಂದರು.
\
ಐಸಿಎಂಆರ್-ಎನ್‌ಐಟಿಎಂನ ನಿರ್ದೇಶಕ ಡಾ.ಜಿ.ಸುಬರ್ಣರಾಯ ಮಾತನಾಡಿ, ಶಿಕ್ಷಣ ಕೇವಲ ಕಲಿಕೆಯ ಪ್ರಯಾಣವಲ್ಲ. ಹೊಸ ಆವಿಷ್ಕಾರಗಳ ತಾಣ. ಮಹಾವಿದ್ಯಾಲಯಗಳು ನಡೆಸುವ ವಿಜ್ಞಾನ ಮತ್ತು ಸಾಂಸ್ಕೃತಿಕ ಹಬ್ಬಗಳು ವಿದ್ಯಾರ್ಥಿಗಳಲ್ಲಿರುವ ಸಂಶೋಧನಾ ಮನೋಭಾವ ಜಾಗೃತಗೊಳಿಸಲು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಲಿಂಗೌಡ ದೇಸಾಯಿ ವಹಿಸಿದ್ದರು. ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ವಿ.ಕೆ.ಗಾಣಿಗೇರ, ಡಾ.ಎಂ.ಎಂ.ತಾಂಬೋಳಿ, ವಿಜಯಕುಮಾರ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net