ಹೊಸೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕೃಷಿ ತರಬೇತಿ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಶಿಕಾಂತ ನಾಯಿಕ, ಎಂ.ಎಸ್. ಪಟಗುಂದಿ, ಬಿ.ಎಸ್.ರಾಮಗಾನಟ್ಟಿ, ಖಾಜಾ ರೂಬಿನಾ ಇತರರಿದ್ದರು.
ಹುಕ್ಕೇರಿ:ಉತ್ತಮ ಆರೋಗ್ಯಕ್ಕೆ ರಾಸಾಯನಿಕ ಮುಕ್ತ ಸಾವಯವ ಪದ್ಧತಿ ಮೂಲಕ ಬೆಳೆ ಬೆಳೆಯಬೇಕು. ಸಾವಯವ ಕೃಷಿ ಪದ್ಧತಿಯಿಂದ ಮಣ್ಣಿನ ಲವತ್ತತೆ ಹಾಗೂ ಪರಿಸರ ಸಂರಕ್ಷಣೆ ಸಾಧ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಪಟಗುಂದಿ ತಿಳಿಸಿದರು.
ತಾಲೂಕಿನ ಹೊಸೂರು ಗ್ರಾಮದಲ್ಲಿ ಕೃಷಿ ಇಲಾಖೆ, ಅರಬಾವಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ ಈಚೆಗೆ ಆಯೋಜಿಸಿದ್ದ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಾಜಿ ಸಚಿವ ಶಶಿಕಾಂತ ನಾಯಕ ಮಾತನಾಡಿ, ರೈತರು ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ಕಡಿತಗೊಳಿಸಿ ಸಾವಯವ ಕೃಷಿಯತ್ತ ಗಮನ ಹರಿಸಬೇಕು. ಇದರಿಂದ ಮಣ್ಣಿನ ಆರೋಗ್ಯ ಹಾಗೂ ಪರಿಸರ ಕಾಪಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಪಿಕೆಪಿಎಸ್ ಅಧ್ಯಕ್ಷ ಅಶೋಕ ಅಕ್ಕತಂಗೇರಹಾಳ, ಬಸಗೌಡ ಪಾಟೀಲ, ಬಿ.ಎಸ್.ರಾಮಗೋನಟ್ಟಿ, ಶ್ರೀಕಾಂತ ಸಾರಾಪುರೆ, ಅರಬಾವಿ ಕೃಷಿ ಕೇಂದ್ರ ನಿರ್ದೇಶಕಿ ಖಾಜಾ ರೂಬಿನಾ ಎಸ್., ಕೃಷಿ ಅಧಿಕಾರಿಗಳಾದ ಮಲ್ಲಿಕಾರ್ಜುನ ಪಾಟೀಲ, ವೈ.ಡಿ.ಗೋಲಬಾವಿ, ಪಿ.ಎಸ್.ಹಲಕರ್ಣಿ, ಎಸ್.ಎಸ್.ಡಬ್ಬಗೋಳ ಇತರರಿದ್ದರು.