ನಿರಂತರ ಅಧ್ಯಯನದಿಂದ ಗುರಿ ಸಾಧನೆ

ಉಪನ್ಯಾಸ ಕಾರ್ಯಕ್ರಮವನ್ನು ನಿವತ್ತ ಪ್ರಾಚಾರ್ಯ ಪ್ರೊ.ಎಸ್.ಎಂ.ಸಕ್ರಿ ಉದ್ಘಾಟಿಸಿದರು. ಡಾ.ಪಿ.ಬಿ.ತೆಗ್ಗಿಹಳ್ಳಿ, ಡಾ.ಜಿ.ಬಿ.ಮುರಗೋಡ ಇತರರಿದ್ದರು.
ಉಪನ್ಯಾಸ ಕಾರ್ಯಕ್ರಮವನ್ನು ನಿವತ್ತ ಪ್ರಾಚಾರ್ಯ ಪ್ರೊ.ಎಸ್.ಎಂ.ಸಕ್ರಿ ಉದ್ಘಾಟಿಸಿದರು. ಡಾ.ಪಿ.ಬಿ.ತೆಗ್ಗಿಹಳ್ಳಿ, ಡಾ.ಜಿ.ಬಿ.ಮುರಗೋಡ ಇತರರಿದ್ದರು.
Published on
ರಾಮದುರ್ಗ: ಸುಸ್ಥಿರ ಏಳಿಗೆ ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು. ಸಮಯ ಪಾಲನೆ, ಸ್ಪಷ್ಟ ಯೋಜನೆ ಮತ್ತು ನಿರಂತರ ಅಧ್ಯಯನದಿಂದ ಗುರಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ನಿವತ್ತ ಪ್ರಾಚಾರ್ಯ ಪ್ರೊ.ಎಸ್.ಎಂ.ಸಕ್ರಿ ಹೇಳಿದರು.
ಪಟ್ಟಣದ ವಿದ್ಯಾಪ್ರಸಾರಕ ಸಮಿತಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಯೋಜನಾ ವೇದಿಕೆ, ಐಕ್ಯೂಎಸಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಧಕ ವಿದ್ಯಾರ್ಥಿಗಳಾದ ರತ್ನಾ ಹಿರೇಮಠ ಹಾಗೂ ಮಹಾದೇವಿ ಗೋವನಕೊಪ್ಪ ಅವರನ್ನು ಸನ್ಮಾನಿಸಲಾಯಿತು.
ಐಕ್ಯೂಎಸಿ ಸಂಯೋಜಕರು, ಸಿಬ್ಬಂದಿ ಇತರರಿದ್ದರು. ಡಾ.ಜಿ.ಬಿ.ಮುರಗೋಡ ಮಾತನಾಡಿದರು. ಎಸ್.ಜಿ.ತೋಟದ ಸ್ವಾಗತಿಸಿದರು. ತನುಶ್ರೀ, ಅಜುಮಾ ನಿರೂಪಿಸಿದರು. ಭೀಮಪ್ಪ ಜಾಡಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net