ಭಾರತವನ್ನು ಪ್ರತಿನಿಧಿಸಿದ್ದ ಒಟ್ಟು 35 ಕುಸ್ತಿಪಟುಗಳ ಪೈಕಿ ವಿವಿಧ ವಿಭಾಗಗಗಳಲ್ಲಿ 6 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಸಮಗ್ರ ವೀರಾಗ್ರಣಿ (ಚಾಂಪಿಯನ್‌ಶಿಪ್) ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಪಾಲ್ಗೊಂಡಿದ್ದವರ ಪೈಕಿ 19 ವರ್ಷದೊಳಗಿನ ವಿಭಾಗದ 65ಕೆಜಿಯಲ್ಲಿ ಶ್ರೇಯಸ್ ದಶರಥ ಹಟ್ಟಿಕರ ಮತ್ತು 60ಕೆಜಿಯಲ್ಲಿ ವಿಕ್ರಮ ಮಂಜುನಾಥ ಚಿಲನವರ ಬೆಳ್ಳಿ ಪದಕ, 14ವರ್ಷದೊಳಗಿನ 62ಕೆಜಿಯಲ್ಲಿ ಸಿದ್ಧಾಂತ ನಿಕೇಶ ಕಡಾಲಿ ಕಂಚು ಹಾಗೂ ಹಿರಿಯರ ವಿಭಾಗದಲ್ಲಿ ಶುಭಂ ಮಾರುತಿ ಹಟ್ಟಿಕ್ಕರ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.