ಬೆಳಗಾವಿ: ಶ್ರೀಲಂಕಾದ ಕೊಲಂಬೋದಲ್ಲಿ ಈಚೆಗೆ ನಡೆದ ಐರನ್ ಮ್ಯಾನ್ ಎವೆಂಟ್ 70.3 ಸ್ಪರ್ಧೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ ನಗರ ಪೊಲೀಸ್ ಕಮೀಷ್ನರೇಟ್ ಸಿಎಆರ್ ಘಟಕದ ಆರ್‌ಎಸ್‌ಐ ಸಂಗಮೇಶ ಆನಿಯವರನ್ನು ಗುರುವಾರ ಸನ್ಮಾನಿಸಲಾಯಿತು.
ಸುರಿಯುವ ಮಳೆ ಮಧ್ಯೆ 90.ಕಿಮೀ ಸೈಕ್ಲಿಂಗ್‌ನ್ನು ಕೇವಲ 2 ಗಂಟೆ 51 ನಿಮಿಷದಲ್ಲಿ ತಲುಪಿ, ನಂತರ 21 ಕಿಮೀ ಓಟವನ್ನು 2 ಗಂಟೆ 15 ನಿಮಿಷದಲ್ಲಿ ಕ್ರಮಿಸಿದ್ದಾರೆ. ಒಟ್ಟು 5 ಗಂಟೆ 9 ನಿಮಿಷಗಳಲ್ಲಿ ಗುರಿ ತಲುಪಿ ಈ ಸಾಧನೆ ಮೆರೆದಿದ್ಧಾರೆ.
ಇದನ್ನು ಪರಿಗಣಿಸಿ ಪೊಲೀಸ್ ಆಯುಕ್ತ ಭೂಷಣ ಬೋರಸೆ ಗುರುವಾರ ಸನ್ಮಾನಿಸಿದರು. ಡಿಸಿಪಿ ನಾರಾಯಣ ಬರಮನಿ ಇತರರಿದ್ದರು.