ಸಂಘದಿಂದ ಆರ್ಥಿಕ ಸಬಲೀಕರಣ ಸಾಧಿಸಿ

ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ವಿಠ್ಠಲ ಹಲಗೇಕರ, ಮಹಾಂತೇಶ ಕವಟಗಿಮಠ, ರಾಜೇಂದ್ರ ಮುತಗೇಕರ, ಡಾ.ಸುಧಾಕರ ಮಹೇಂದ್ರಕರ ಇತರರಿದ್ದರು.
ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ವಿಠ್ಠಲ ಹಲಗೇಕರ, ಮಹಾಂತೇಶ ಕವಟಗಿಮಠ, ರಾಜೇಂದ್ರ ಮುತಗೇಕರ, ಡಾ.ಸುಧಾಕರ ಮಹೇಂದ್ರಕರ ಇತರರಿದ್ದರು.
Published on

ಗ್ರಾಮೀಣ ಜನರ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಮುಖ್ಯವಾಗಿದ್ದು, ಸಮರ್ಪಕ ಬಳಕೆಯ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಿ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ ನ್ಯಾಷನಲ್ ಶಾಲೆಯಲ್ಲಿ ಸಹಕಾರ ಭಾರತಿ ಕರ್ನಾಟಕ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ತಾಲೂಕು ಅಭ್ಯಾಸ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಕ್ಷೇತ್ರವನ್ನು ಸಂಘಟಿಸಿ ವಿಸ್ತರಿಸುವುದರಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ನೀಡಲು ಸಾಧ್ಯ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಪರಸ್ಪರ ಅರಿತು ನಡೆಯುವ ಮೂಲಕ ಸಹಕಾರ ಕ್ಷೇತ್ರ ಬಲಪಡಿಸುವ ಅಗತ್ಯವಿದೆ ಎಂದರು. ಸಹಕಾರ ಭಾರತಿ ಜಿಲ್ಲಾಧ್ಯಕ್ಷ ರಾಜೇಂದ್ರ ಮುತಗೇಕರ, ಸಹಕಾರ ಭಾರತಿ ರಾಜ್ಯ ಸಂಘಟನಾ ಪ್ರಮುಖ ಡಾ.ಸುಧಾಕರ ಮಹೇಂದ್ರಕರ, ಪಾರಿಶ್ವಾಡ ಹನಿವೆಲ್ ಇಂಟರನ್ಯಾಷನಲ್ ಶಾಲೆಯ ಸುಭಾಸ ಗುಳಶೆಟ್ಟಿ ಮಾತನಾಡಿದರು.
ಆರ್‌ಎಸ್‌ಎಸ್ ಪ್ರಮುಖ ಸುಭಾಸ ದೇಶಪಾಂಡೆ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರಮೋದ ಕೊಚೇರಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಶ್ರೀ ಸರ್‌ದೇಸಾಯಿ, ವೀರೇಶ ದೇವರಮನಿ, ಶಿವಾನಂದ ಪಾಟೀಲ, ಸುನೀಲ ಮಡ್ಡಿಮನಿ, ಶ್ರೀಕಾಂತ ಇಟಗಿ, ಬಸವರಾಜ ಕುಕಡೊಳ್ಳಿ, ಸಂಜೀವ ನಾಶಿಪುಡಿ, ರೇಣುಕಾ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net