ಕಾರು ಪಲ್ಟಿಯಾಗಿ ಸ್ಥಳದಲ್ಲೇ ಸಾವು

death
death
Published on
ನಾಗರಮುನ್ನೋಳಿ: ಮಹಾರಾಷ್ಟ್ರದ ಸಾವಂತವಾಡಿಯಿಂದ ನಾಗರಮುನ್ನೋಳ್ಳಿ ಗ್ರಾಮಕ್ಕೆ ಮರುಳುತ್ತಿರುವ ವೇಳೆ ಕಾರು ಪಲ್ಟಿಯಾಗಿ ಗ್ರಾಮದ ಲಕ್ಷ್ಮಣ ಶಂಕರ ಕೊಟಬಾಗಿ (42) ಸ್ಥಳದಲ್ಲೇ ಮೃತಪಟ್ಟರೆ, ಸಾಗರ ನೇರ್ಲಿ (34) ಗಂಭೀರ ಗಾಯಗೊಂಡ ಘಟನೆ ಅಜರಾ ಗ್ರಾಮದ ಸಮೀಪ ಮಂಗಳವಾರ ನಡೆದಿದೆ. ಗಂಭೀರ ಗಾಯಗೊಂಡ ಸಾಗರ ನೇರ್ಲಿ ಅವರನ್ನು ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಜರಾ ಠಾಣೆ ಪೊಲೀಸರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net