ಹುಕ್ಕೇರಿಯ ಮಹಾವೀರ ಶಿಕ್ಷಣ ಸಂಸ್ಥೆ ವಾರ್ಷಿಕ ಶಾಲಾ ಉತ್ಸವ ಕಾರ್ಯಕ್ರಮವನ್ನು ಪೃಥ್ವಿ ಕತ್ತಿ ಉದ್ಘಾಟಿಸಿದರು. ಮಹಾವೀರ ನಿಲಜಗಿ, ಅಜಿತ್ ಮುನ್ನೋಳಿ, ಸತ್ಯಪ್ಪ ನಾಯಿಕ, ಪ್ರಜ್ವಲ ನಿಲಜಗಿ ಇತರರಿದ್ದರು.
ಸೋಲು-ಗೆಲುವು ಸಮನಾಗಿ ಸ್ವೀಕರಿಸಲಿ Accept victory and defeat equally.
ಹುಕ್ಕೇರಿ:ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸೋಲು-ಗೆಲುವು ಸಮನಾಗಿ ಸ್ವೀಕರಿಸಬೇಕು ಅಂದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಪಟ್ಟಣದ ಮಹಾವೀರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಶಾಲಾ ಉತ್ಸವ ಮತ್ತು ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜತೆಗೆ ಸಂಸ್ಕೃತಿ ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಚಿಕ್ಕೋಡಿ ಜಿಲ್ಲಾ ಉಪಾಧ್ಯಕ್ಷ ಸತ್ಯಪ್ಪ ನಾಯಿಕ ಮಾತನಾಡಿ, ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ದೇಸಿ ಕ್ರೀಡೆಗಳು ಹೆಚ್ಚು ಸಹಕಾರಿಯಾಗಿವೆ. ಆದ್ದರಿಂದ ದೇಸಿ ಕ್ರೀಡೆ ಉಳಿಸಿ, ಬೆಳೆಸಬೇಕು ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಎಸ್.ಐ.ಸಂಬಾಳ ಮಾತನಾಡಿ, ಶಿಕ್ಷಣ ಎಂಬುದು ಕಡಲ ಸಾಗರವಿದ್ದಂತೆ. ಅದನ್ನು ದಾಟಿದರೆ ಎಲ್ಲೆಡೆ ಗೌರವ ಸಿಗುತ್ತದೆ ಎಂದು ಹೇಳಿದರು. ಅತಿಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಉಪಾಧ್ಯಕ್ಷ ಅಜಿತ್ ಮುನ್ನೋಳಿ, ಮಹಾವೀರ ಸಂಸ್ಥೆ ಉಪಾಧ್ಯಕ್ಷ, ಪ್ರಜ್ವಲ ನಿಲಜಗಿ, ಕಾರ್ಯದರ್ಶಿ ಸಂಜಯ ನಿಲಜಗಿ, ಬಿ.ಬಿ.ಲಠ್ಠೆ, ಶ್ರೀಧರ ಖತಗಲ್ಲಿ, ಮುಖ್ಯಶಿಕ್ಷಕ ಸಂಗಮೇಶ ಕರಹೊನ್ನವರ, ಅಂಜನಾ ಗುಗ್ಗಳಿ, ಸುಜಾತಾ ಕೋಳಿ, ಸಂಗಮೇಶ ಕರಹೊನ್ನವರ ಇತರರಿದ್ದರು.