ಸೋಲು ಗೆಲುವು ಸಮವಾಗಿ ಸ್ವೀಕರಿಸಿ

ಮುರಗೋಡದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಫೈನಲ್‌ನಲ್ಲಿ ವಿಜೇತ ಮುರಗೋಡ ಟೈಗರ್ ತಂಡಕ್ಕೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಬಹುಮಾನ ವಿತರಿಸಿದರು. ಸುರೇಶ ಮ್ಯಾಕಲ, ಗಿರೀಶ ಅಳಾಜ ಇತರರಿದ್ದರು.
ಮುರಗೋಡದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಫೈನಲ್‌ನಲ್ಲಿ ವಿಜೇತ ಮುರಗೋಡ ಟೈಗರ್ ತಂಡಕ್ಕೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಬಹುಮಾನ ವಿತರಿಸಿದರು. ಸುರೇಶ ಮ್ಯಾಕಲ, ಗಿರೀಶ ಅಳಾಜ ಇತರರಿದ್ದರು.
Published on
ಮುರಗೋಡ: ಕ್ರೀಡೆಯಿಂದ ದೈಹಿಕ ಶಕ್ತಿ ಹಾಗೂ ಮಾನಸಿಕ ನೆಮ್ಮದಿ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಪ್ರಮುಖ. ಹೀಗಾಗಿ, ಎಲ್ಲ ಕ್ರೀಡಾಪಟುಗಳು ಸೋಲು-ಗೆಲುವು ಸಮವಾಗಿ ಸ್ವೀಕರಿಸಬೇಕು ಎಂದು ಮಾಜಿ ಶಾಸಕ ಡಾ.ವಿ.ಐ.ಪಾಟೀಲ ಹೇಳಿದರು.
ಜಮಾದರ ಮೈದಾನದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ೧೨ ವರ್ಷದ ಪೂರೈಸಿದ ಹಿನ್ನೆಲೆಯಲ್ಲಿ ಕಿತ್ತೂರು ಕರ್ನಾಟಕ ಸೇನೆ ಈಚೆಗೆ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಪ್ರೀಮಿಯರ್ ಲೀಗ್ ರಾಜ್ಯ ಮಟ್ಟದ ಕ್ರಿಕೆಟ್ ಫೈನಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಗುರುವಾರ ಬಹುಮಾನ ವಿತರಿಸಿ ಮಾತನಾಡಿದರು.
ವಿಜೇತ ತಂಡ: ಫೈನಲ್ ಪಂದ್ಯದಲ್ಲಿ ಮುರಗೋಡ ಟೈಗರ್ ತಂಡ ಪ್ರಥಮ, ಬೈಲಹೊಂಗಲದ ಜಾಕಿ ಎಲಿವನ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಸಂತೋಷ ಆಲರೌಂಡರ್, ಪ್ರತೀಕ ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು.
ತಾಪಂ ಮಾಜಿ ಸದಸ್ಯ ಸುರೇಶ ಮ್ಯಾಕಲ, ಗಿರೀಶ ಅಳಾಜ ಮಾತನಾಡಿದರು. ಮಂಜುನಾಥ ಕುಸಲಾಪುರ, ಶೇಖನಗೌಡ ಪಾಟೀಲ, ಬಸವರಾಜ ಕಿಲ್ಲೇದಾರ, ರಾಜು ಕಲ್ಮಠ, ಬಸವರಾಜ ಕಿತ್ತೂರ, ಭೀಮಶಿ ಯಲ್ಲನಾಯ್ಕರ, ಪ್ರಶಾಂತ ಕಿತ್ತೂರ, ಶಿವು ಹಡಪದ, ಮಹೇಶ ರಗಟ್ಟಿ, ಈರಣ್ಣ ಸಿದ್ದನಗೌಡರ, ಪ್ರಕಾಶ ಹಟ್ಟಿಹೊಳಿ, ತೌಶೀಫ್ ಪಾಟೀಲ, ಮಹಾಂತೇಶ ಬಾಳಿಕಾಯಿ, ಪ್ರಶಾಂತ ಕಮ್ಮಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net