ಸುಖ-ದುಃಖ ಸಮನಾಗಿ ಸ್ವೀಕರಿಸಿ

ಮುನವಳ್ಳಿ ಜ್ಞಾನೇಶ್ವರ ಗ್ರಂಥ ಸಾಮೂಹಿಕ ಪಾರಾಯಣ, ಹರಿನಾಮ ಸಪ್ತಾಹ ಮಹೋತ್ಸವದಲ್ಲಿ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಾಬಾಸಾಹೇಬ ಅಜರೇಕರ, ಜೀಜಾತಾಯಿ ಅಜರೇಕರ, ಶಿವಾನಂದ ಸ್ವಾಮೀಜಿ, ವಿರೂಪಾಕ್ಷ ಮಾಮನಿ ಇತರರಿದ್ದರು.
ಮುನವಳ್ಳಿ ಜ್ಞಾನೇಶ್ವರ ಗ್ರಂಥ ಸಾಮೂಹಿಕ ಪಾರಾಯಣ, ಹರಿನಾಮ ಸಪ್ತಾಹ ಮಹೋತ್ಸವದಲ್ಲಿ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಬಾಬಾಸಾಹೇಬ ಅಜರೇಕರ, ಜೀಜಾತಾಯಿ ಅಜರೇಕರ, ಶಿವಾನಂದ ಸ್ವಾಮೀಜಿ, ವಿರೂಪಾಕ್ಷ ಮಾಮನಿ ಇತರರಿದ್ದರು.
Published on
ಮುನವಳ್ಳಿ: ಇಂದಿನ ಆಧುನಿಕ ಯುಗದಲ್ಲಿ ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಮರೆಯಾಗುತ್ತಿದ್ದು, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ನೀಡಬೇಕು. ಮಕ್ಕಳಲ್ಲಿ ಸಂಸ್ಕಾರ ಬಿತ್ತಲು ಸಪ್ತಾಹಗಳು ಪ್ರೇರಣೆಯಾಗಿವೆ ಎಂದು ಸವದತ್ತಿ ತಾಲೂಕಿನ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕುಮಾರೇಶ್ವರ ವಿದ್ಯಾ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜ್ಞಾನೇಶ್ವರ ಸಾಮೂಹಿಕ ಪಾರಾಯಣ ಹಾಗೂ ಹರಿನಾಮ ಸಪ್ತಾಹ ಮಹೋತ್ಸವದಲ್ಲಿ ಮಾತನಾಡಿ, ಪಾಲಕರು ಜ್ಞಾನೇಶ್ವರ ಪಾರಾಯಣ ಮತ್ತು ಹರಿನಾಮ ಸಪ್ತಾಹಗಳಂತಹ ಪವಿತ್ರ ಕಾರ್ಯಕ್ರಮಗಳಿಗೆ ತಮ್ಮ ಮಕ್ಕಳನ್ನು ಕರೆತಂದು ಅವರಲ್ಲಿ ಧಾರ್ಮಿಕ ವಾತಾವರಣದ ಒಲವನ್ನು ಬೆಳೆಸಬೇಕು ಅಂದಾಗ ಮಾತ್ರ ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಲು ಸಾಧ್ಯ ಎಂದರು.
ಶಿಂದೋಗಿ ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಎದುರಾಗುವ ಸುಖ-ದುಃಖ ಎರಡನ್ನೂ ಸಮಾನ ಚಿತ್ತದಿಂದ, ಪ್ರಸಾದ ಗುಣದಿಂದ ಸ್ವೀಕರಿಸುವವನೇ ನಿಜವಾದ ಸಂತ ಎಂದರು.
ಗೊರವನಕೊಳ್ಳದ ಶಿವಾನಂದ ಸ್ವಾಮೀಜಿ ಮಾತನಾಡಿದರು. ಂಡರಪುರದ ಗುರು ಬಾಬಾಸಾಹೇಬ ಅಜರೇಕರ, ಜೀಜಾಬಾಯಿ ಅಜರೇಕರ, ಶ್ರೀಕಾಂತ ಮಿರಜಕರ, ಜ್ಞಾನೇಶ್ವರ ತೇಲಕರ, ಸುಧಾಕರ ರೇಣಕೆ, ಅಂಗದ ರೇಣಕೆ, ಅಪ್ಪು ಅಮಠೆ, ಸತೀಶ ರೇಣಕೆ, ಗೋವಿಂದ ರೇಣಕೆ, ನಾಮದೇವ ಸುಲಾಖೆ, ಗಂಗಾಧರ ಅಲಮಣ್ಣವರ, ಶಂಕರ ರಾಠೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net