ಶಿಥಿಲಾವಸ್ಥೆ ತಲುಪಿರುವ ಗರಡಿಮನೆ

ಶಿಥಿಲಾವಸ್ಥೆಯಲ್ಲಿ ಮಲ್ಲಮ್ಮನ ಬೆಳವಡಿ ಗ್ರಾಮದ ಗರಡಿಮನೆ.
ಶಿಥಿಲಾವಸ್ಥೆಯಲ್ಲಿ ಮಲ್ಲಮ್ಮನ ಬೆಳವಡಿ ಗ್ರಾಮದ ಗರಡಿಮನೆ.
Published on
ಮಲ್ಲಮ್ಮನ ಬೆಳವಡಿ: ಹೆಸರಾಂತ ಜಗಜಟ್ಟಿಗಳಿಗೆ ತಾಲೀಮು ಕೇಂದ್ರವಾಗಿದ್ದ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿರುವ ಗರಡಿಮನಿ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ದಿ.ಮಡ್ಯಪ್ಪ ಕರಿಕಟ್ಟಿ, ದಿ.ಬಸಯ್ಯ ಕಾರಿಮನಿ, ದಿ.ನಿಂಗಪ್ಪ ಕರಿಕಟ್ಟಿ, ದಿ.ನಿಂಗಪ್ಪ ತುರಾಯಿ, ದಿ.ಸಂಗಪ್ಪ ಸಾವಿ ಹಾಗೂ ದಿ.ನಿಂಗಪ್ಪ ದಳವಾಯಿ ಸೇರಿದಂತೆ ಸುಪ್ರಸಿದ್ಧ ಪೈಲ್ವಾನರು ಪಳಗಿದ ಹಿರಿಮೆ ಈ ಗರಡಿಮನೆಗಿದೆ.
ಸುಮಾರು ನಾಲ್ಕು ದಶಕಗಳ ಹಿಂದೆ ನಿರ್ಮಾಣವಾಗಿದ್ದ ಗರಡಿಮನೆ ಸ್ಥಳೀಯ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಪೈಲ್ವಾನರಿಗೆ ತರಬೇತಿ ಕೇಂದ್ರವಾಗಿತ್ತು. ಆದರೆ, ಕಾಲ ಕ್ರಮೇಣ ಕುಸ್ತಿ ಪರಂಪರೆ ಅಳವಿನಂಚಿಗೆ ತಲುಪಿ ಪೈಲ್ವಾನರ ಸಂಖ್ಯೆ ವಿರಳವಾಯಿತು.
ದಿನದಿಂದ ದಿನಕ್ಕೆ ಗರಡಿಮನೆ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಇಂದೊ ನಾಳೆ ಬಿಳುವ ಸ್ಥಿತಿಯಲ್ಲಿದೆ. ಅಗತ್ಯ ಕೆಲಸ-ಕಾರ್ಯಗಳಿಗೆ ತೆರಳುವ ಸಾರ್ವಜನಿಕರು ಗರಡಿಮನೆ ಬಳಿ ಪ್ರಾಣ ಭಯದಲ್ಲಿ ಓಡಾಡುವಂತಾಗಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಿಥಿಲಾವಸ್ಥೆಯಲ್ಲಿರುವ ಗರಡಿಮನೆ ನೆಲಸಮಗೊಳಿಸಿ ಹೊಸ ಗರಡಿಮನೆ ನಿರ್ಮಿಸುವ ಮೂಲಕ ಸಂಸ್ಕೃತಿ, ಪರಂಪರೆ ಉಳಿವಿಗೆ ಮುಂಗಾಗಬೇಕೆಂಬುದು ಸ್ಥಳೀಯರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net