ಶ್ರೀಮಂತರ ಬಡ ಬಡಾವಣೆ!

 ಬೆಳಗಾವಿಯ ರಾಣಿ ಚನ್ನಮ್ಮ ನಗರ ಬಡಾವಣೆಯ ಒಳ ರಸ್ತೆಗಳ ಪರಿಸ್ಥಿತಿ.
ಬೆಳಗಾವಿಯ ರಾಣಿ ಚನ್ನಮ್ಮ ನಗರ ಬಡಾವಣೆಯ ಒಳ ರಸ್ತೆಗಳ ಪರಿಸ್ಥಿತಿ.
Published on

ಬಡಾವಣೆ ಬವಣೆ

  • ಡಿ.ವಿ.ಕಮ್ಮಾರ ಬೆಳಗಾವಿ
ಬೆಳಗಾವಿ ನಗರಾಭಿವೃದಿಟಛಿ ಪ್ರಾಧಿಕಾರ (ಬುಡಾ) ದಿಂದ ಮೊಟ್ಟಮೊದಲು ಅಭಿವೃದಿಟಛಿಗೊಂಡು ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡ ಅತ್ಯಂತ ಹಿರಿಯ ಬಡಾವಣೆ ಎಂಬ ಹೆಗ್ಗಳಿಕೆ ಇಲ್ಲಿನ ರಾಣಿ ಚನ್ನಮ್ಮ ನಗರಕ್ಕಿದೆ. ಸುಮಾರು ಐದು ದಶಕಗಳ ಇತಿಹಾಸ ಹೊಂದಿರುವ ಪ್ರದೇಶ ಈಗ ‘ಶ್ರೀಮಂತರು ಮತ್ತು ಪ್ರತಿಷ್ಠಿತರು ವಾಸಿಸುವ ಬಡ ಬಡಾವಣೆ’ ಎಂಬ ಕುಖ್ಯಾತಿ ಪಡೆದಿದೆ.
ಜನರಿಗೆ ಬೇಕಾದ ಮಾರುಕಟ್ಟೆ, ವಿವಿಧ ವಸ್ತುಗಳ ದೊಡ್ಡ ಮಳಿಗೆಗಳು, ಅಂಗಡಿ, ಬ್ಯಾಂಕ್, ಆಸ್ಪತ್ರೆ ಸೇರಿದಂತೆ ವಾಣಿಜ್ಯ ಸೌಲಭ್ಯಗಳು ಇಲ್ಲಿವೆ. ಯಾವುದೇ ವಸ್ತು ಖರೀದಿಗೆ ನಗರಕ್ಕೆ ಬರಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳಿಗಿಲ್ಲ. ಆದರೆ, ಮೂಲ ಸೌಕರ್ಯಗಳ ಕೊರತೆ ಮತ್ತು ಆಡಳಿತಾತ್ಮಕ ಗೊಂದಲಗಳಿಂದ ಹಲವು ಸಮಸ್ಯೆಗಳ ಸುಳಿಗೆ ಸಿಲುಕಿರುವ ಬಡಾವಣೆ ತ್ರಿಶಂಕು ಸ್ಥಿತಿಯಲ್ಲಿ ನಲುಗುತ್ತಿದೆ.
ನನೆಗುದಿಗೆ ಬಿದ್ದ ರಸ್ತೆ:
ಫೌಂಡ್ರಿ ಕ್ಲಸ್ಟರ್ ಮುಂಭಾಗದಿಂದ ಹೋಗುವ 100 ಅಡಿ ರಸ್ತೆ ಪ್ರಸ್ತಾವ ದಶಕಗಳಿಂದ ಬಾಕಿ ಉಳಿದಿದೆ. ಭೂಸ್ವಾಧೀನ ವಿಳಂಬ,ಪರಿಹಾರ ವಿತರಣೆಯಲ್ಲಿ ತಾರತಮ್ಯ, ರಾಜಕೀಯ ಹಿತಾಸಕ್ತಿಗಳಿಂದ ಈ ಯೋಜನೆ ಪೂರ್ಣಗೊಂಡಿಲ್ಲ. ಈ ರಸ್ತೆ ನಿರ್ಮಾಣವಾದರೆ ಮಂಡೋಳಿ, ಸಾವಗಾಂವ ಭಾಗದ ಕಾರ್ಮಿಕರು ಉದ್ಯಮಬಾಗದ ಕಾರ್ಖಾನೆಗಳಿಗೆ ಕಾಂಗ್ರೆಸ್ ರಸ್ತೆ ಮೂಲಕ ಸುತ್ತುವರಿದು ಬರುವ ಬದಲಿಗೆ ನೇರವಾಗಿ ಓಡಾಡಬಹುದಾಗಿದೆ. ಸದ್ಯ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿರುವುದರಿಂದ ಈ ರಸ್ತೆ ಕಟ್ಟಡ ತ್ಯಾಜ್ಯ ಎಸೆಯುವ ಕೇಂದ್ರವಾಗಿ ಮಾರ್ಪಟ್ಟಿದೆ.
ಪಾರ್ವತಿ ನಗರ, ಪೋಸ್ಟಲ್ ಕಾಲನಿ, ಬಾಬು ತಾರಾಪಾದ ನಗರದ ರಸ್ತೆಗಳು ಕಲ್ಲುಗಳಿಂದ ತುಂಬಿದ್ದು, ಗುಡ್ಡಗಾಡಿನ ರಸ್ತೆಯಂತಾಗಿವೆ. ಈ ಭಾಗದಲ್ಲಿ ವಾರಕ್ಕೊಮ್ಮೆ ಕುಡಿಯುವ ನೀರು ಬರುತ್ತಿದೆ.
ಮೊದಲ ಮತ್ತು ಎರಡನೇ ಹಂತದಲ್ಲಿ ಮಾತ್ರ ಒಂದಷ್ಟು ಸುಧಾರಣೆಯಾಗಿದ್ದು ಬಿಟ್ಟರೆ, ಬಡಾವಣೆ ಒಳಗೆ ಹೋದಂತೆ ಒಂದೊಂದೇ ಸಮಸ್ಯೆಗಳು ಕಣ್ಣಿಗೆ ರಾಚುತ್ತವೆ. ಉದ್ಯಾನಗಳನ್ನು ಚೆನ್ನಾಗಿ ನಿರ್ಮಿಸಿದ್ದರೂ ನಿರ್ವಹಣೆ ಸಮರ್ಪಕವಾಗಿಲ್ಲ. ಬಹುತೇಕ ರಸ್ತೆಗಳು ಎಲ್ ಆ್ಯಂಡ್ ಟಿ ಕಾಮಗಾರಿಗೆ ಬಲಿಯಾಗಿವೆ.
ಸ್ಮಶಾನ ಕೊರತೆ:
ಸ್ಥಳೀಯವಾಗಿ ಸ್ಮಶಾನವಿಲ್ಲದ ಕಾರಣ ಅಂತ್ಯಸಂಸ್ಕಾರಕ್ಕಾಗಿ ಜನರು ಶಹಾಪುರ ಅಥವಾ ಅನಗೋಳಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಪಾರ್ವತಿನಗರದ ಬಳಿ ಸರ್ಕಾರಿ ಜಾಗವಿದ್ದು, ಸ್ಮಶಾನಕ್ಕಾಗಿಯೇ ಮೀಸಲಿಡಲಾಗಿದೆ. ಇದಕ್ಕೆ ಕಾಂಪೌಂಡ್ ನಿರ್ಮಾಣ ಅನುದಾನವೂ ಸಿಕ್ಕಿತ್ತು. ಆದರೂ ಕೆಲಸವಾಗಿಲ್ಲ. ಸ್ಥಳೀಯರು ಈ ಕುರಿತು ಹಲವು ಬಾರಿ ಮಹಾ ನಗರ ಪಾಲಿಕೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಚರಂಡಿ ಅವ್ಯವಸ್ಥೆ:
ಇಲ್ಲಿನ ಒಳಚರಂಡಿ ವ್ಯವಸ್ಥೆ ಶಿಥಿಲಗೊಂಡಿದ್ದು, ಸಂಪೂರ್ಣ ಬದಲಾಯಿಸುವ ಅವಶ್ಯವಿದೆ. ಬಡಾವಣೆಯ ಮುಖ್ಯ ಪ್ರದೇಶಗಳಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿ ಈಚೆಗೆ ಒಂದಷ್ಟು ಗಟಾರು ನಿರ್ಮಾಣಗೊಂಡಿವೆ. ಒಳಭಾಗದಲ್ಲಿ ಹಳೇ ಚರಂಡಿ ವ್ಯವಸ್ಥೆಯೇ ಇದ್ದು, ತ್ಯಾಜ್ಯ ನೀರು ಸಮರ್ಪಕವಾಗಿ ಹರಿದು ಹೋಗುತ್ತಿಲ್ಲ. ಬಡಾವಣೆಯಲ್ಲಿನ ಖಾಲಿ ನಿವೇಶನಗಳು ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಬಡಾವಣೆ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಸಮುದಾಯ ಭವನಗಳನ್ನು ಪಾಲಿಕೆಗೆ ಹಸ್ತಾಂತರಿಸಿ, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸುವ ಪ್ರಕ್ರಿಯೆಯೂ ವಿಳಂಬವಾಗಿದೆ.

ಪಾರ್ವತಿನಗರ, ಜೈತುನ್ ಮಾಳ ಮತ್ತು ಭವಾನಿನಗರದ ನಿವಾಸಿಗಳು ಮಹಾನಗರ ಪಾಲಿಕೆಮತ್ತು ಪೀರನವಾಡಿ ಪಟ್ಟಣ ಪಂಚಾಯಿತಿಮಧ್ಯೆ ಯಾವ ವ್ಯಾಪ್ತಿಗೆ ಸೇರುತ್ತೇವೆ ಎನ್ನುವಗೊಂದಲದಲ್ಲಿದ್ದಾರೆ. ತೆರಿಗೆ ಪಾವತಿ, ಎನ್‌ಎಅನುಮತಿಗಳ ವಿಷಯದಲ್ಲೂ ಗೊಂದಲವಿದೆ.ಇಲ್ಲಿನ ನಿವಾಸಿಗಳು ಅತ್ತ ಪೀರನವಾಡಿಪಪಂ ಚುನಾವಣೆ, ಇತ್ತ ಪಾಲಿಕೆ ಚುನಾವಣೆಎರಡರಲ್ಲೂ ಮತ ಚಲಾವಣೆ ಮಾಡುತ್ತಾಬಂದಿದ್ದಾರೆ. ಉದ್ಯಮಬಾಗ, ಟಿಳಕವಾಡಿ ಮತ್ತುವಡಗಾವಿ (ಗ್ರಾಮೀಣ) ಠಾಣೆ ವ್ಯಾಪ್ತಿಯಲ್ಲಿಬಡಾವಣೆ ಹಂಚಿಕೆಯಾಗಿದ್ದು, ಅಪರಾಧಅಥವಾ ಅಪಘಾತ ಸಂಭವಿಸಿದಾಗ ಠಾಣೆ ಗಡಿವ್ಯಾಪ್ತಿ ಗೊಂದಲದಿಂದ ಪೊಲೀಸರ ಸ್ಪಂದನೆವಿಳಂಬವಾಗುತ್ತಿದೆ. ಒಂದೇ ಪೊಲೀಸ್ ಠಾಣೆವ್ಯಾಪ್ತಿಗೆ ಸೇರಿಸುವಂತೆ ಸ್ಥಳೀಯರು ಮನವಿಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net