ನಗರದ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನ `ಇಟರ್ನೇಲಿಯಾ' ಉದ್ಘಾಟಿಸಿ ಮಾತನಾಡಿ, ಮಕ್ಕಳ ಆರೋಗ್ಯದತ್ತ ಶಾಲೆ ಸಿಬ್ಬಂದಿ ಗಮನಹರಿಸಬೇಕು ಎಂದರು. ಪ್ರಾಚಾರ್ಯೆ ಆಶಾಕಾಂತಾ ಮಾರ್ಟಿನ್ ಮಾತನಾಡಿ, ಕಥೆ, ನೃತ್ಯ, ಸಂಗೀತ ಮತ್ತು ನಾಟಕಗಳ ಸಂಗಮದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಪರಿಣಾಮಕಾರಿ ಶಿಕ್ಷಣ ವ್ಯವಸ್ಥೆ, ಪಾಲಕರೊಂದಿಗೆ ಸಮನ್ವಯ ಮತ್ತು ಶಾಲೆಯಲ್ಲಿರುವ ಸೌಕರ್ಯಗಳ ಕುರಿತು ವಿವರಿಸಿದರು.