ಮೋದಿ ನಾಯಕತ್ವದಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕು

ಬೆಳಗಾವಿಯಲ್ಲಿ ಶನಿವಾರ ಸಂಸದ ಜಗದೀಶ ಶೆಟ್ಟರ್ ಕೇಂದ್ರ ಸರ್ಕಾರದ ಜನಪರಯೋಜನೆಗಳ ಮಾಹಿತಿ ಫಲಕ ಬಿಡುಗಡೆಗೊಳಿಸಿದರು. ಮಂಗಲ ಅಂಗಡಿ, ವಿಠ್ಠಲ ಹಲಗೇಕರ,  ಸಂಜಯ ಪಾಟೀಲ, ಈರಣ್ಣ ಕಡಾಡಿ, ಮುರೆಂದ್ರಗೌಡ ಪಾಟೀಲ, ಸುಭಾಸ ಪಾಟೀಲ, ಡಾ.ರವಿ ಪಾಟೀಲ, ಎಂ.ಬಿ.ಝಿರಲಿ, ಅರವಿಂದ ಪಾಟೀಲ, ಹನಮಂತ ಕೊಂಗಾಲಿ ಇತರರಿದ್ದರು.
ಬೆಳಗಾವಿಯಲ್ಲಿ ಶನಿವಾರ ಸಂಸದ ಜಗದೀಶ ಶೆಟ್ಟರ್ ಕೇಂದ್ರ ಸರ್ಕಾರದ ಜನಪರಯೋಜನೆಗಳ ಮಾಹಿತಿ ಫಲಕ ಬಿಡುಗಡೆಗೊಳಿಸಿದರು. ಮಂಗಲ ಅಂಗಡಿ, ವಿಠ್ಠಲ ಹಲಗೇಕರ, ಸಂಜಯ ಪಾಟೀಲ, ಈರಣ್ಣ ಕಡಾಡಿ, ಮುರೆಂದ್ರಗೌಡ ಪಾಟೀಲ, ಸುಭಾಸ ಪಾಟೀಲ, ಡಾ.ರವಿ ಪಾಟೀಲ, ಎಂ.ಬಿ.ಝಿರಲಿ, ಅರವಿಂದ ಪಾಟೀಲ, ಹನಮಂತ ಕೊಂಗಾಲಿ ಇತರರಿದ್ದರು.
Published on
ಬೆಳಗಾವಿ : ಪ್ರದಾನಿ ನರೇಂದ್ರ ಮೋದಿ ನಾಯಕತ್ವದ ಕೇಂದ್ರ ಸರ್ಕಾರದಿಂದ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹೊಸ ದಿಕ್ಕು ಲಭಿಸಿದೆ. 4,399ಕ್ಕೂ ಹೆಚ್ಚು ದಿನ ಪ್ರಧಾನಿಯಾಗಿ ಸೇವೆ ಸಲ್ಲಿಸುವ ಮೂಲಕ ದೇಶದ ಇತಿಹಾಸದಲ್ಲೇ ದೀರ್ಘಾವಧಿ ಆಡಳಿತ ನಡೆಸಿದ ದಾಖಲೆ ಮಾಡಿರುವ ನರೇಂದ್ರ ಮೋದಿಯವರು, ಜವಾಹರಲಾಲ್ ನೆಹರು ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಿಂದ ನಡೆದ ಪ್ರತಿ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಜಲಜೀವನ್ ಮಿಷನ್ ಯೋಜನೆಯಡಿ ಕರ್ನಾಟಕದಲ್ಲಿ 87 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಮನೆಗಳಿಗೆ ನೀರು ಒದಗಿಸಲಾಗಿದೆ. ಜನದನ್ ಅಡಿ ರಾಜ್ಯದ 2.12 ಕೋಟಿ ಜನತೆಯನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದ್ದಾರೆ. ಪಿಎಂ ಕಿಸಾನ್, ಮುದ್ರಾ ಯೋಜನೆಯಡಿ ಲಕ್ಷಾಂತರ ಜನರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಮೂಲಕ ಅಭಿವೃದ್ಧಿ ಜತೆಗೆ ಹೊಸ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.
ಬೆಳಗಾವಿ ಜಿಲ್ಲೆಯಲ್ಲೂ ಹಲವಾರು ಸೌಲಭ್ಯಗಳು ಲಭಿಸಿದೆ. ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣದ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ವಿಮಾನಗಳ ಸಂಖ್ಯೆ ಸಂಪರ್ಕ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೂ ಪ್ರಯತ್ನಿಸಲಾಗುತ್ತಿದೆ. ರಾಜ್ಯ ಸರ್ಕಾರ ರೈಲ್ವೆ ಹಾಗೂ ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಸೂಕ್ತ ಅನುದಾನ ನೀಡದಿರುವುದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಮರಾಠಿ ಭಾಷಿಕರ ಮತ ಓಲೈಕೆಗಾಗಿ ಬಿಜೆಪಿ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕರಿಸಲು ನಿರಾಕರಿಸುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ. ಮರಾಠಿ ಭಾಷಿಕರೇನು ಪಾಕಿಸ್ತಾನದವರಲ್ಲ, ಕನ್ನಡ ಹಾಗೂ ಮರಾಠಿಗರು ಅನ್ಯೋನ್ಯತೆಯಿಂದ ಇದ್ದಾರೆ. ಎಲ್ಲರೂ ಒಗ್ಗಟ್ಟಾಗಿರುವ ಮೂಲಕ ಅಭಿವೃದ್ಧಿ ಸಾಧಿಸಬೇಕು. ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತಿರುವಂತೆ ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಸೇರಿ ಚರ್ಚಿಸುತ್ತೇವೆ ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ವಿಠ್ಠಲ ಹಲಗೇಕರ, ಉಪಮೇಯರ್ ಹನುಮಂತ ಕೊಂಗಾಲಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಶಾಸಕರಾದ ಸಂಜಯ ಪಾಟೀಲ, ಅರವಿಂದ ಪಾಟೀಲ, ಬಿಜೆಪಿ ವಕ್ತಾರ ಎಂ.ಬಿ.ಜಿರಲಿ, ಸುಭಾಷ ಪಾಟೀಲ, ಗೀತಾ ಸುತಾರ, ಡಾ.ರವಿ ಪಾಟೀಲ, ಮುರೇಂದ್ರಗೌಡ ಪಾಟೀಲ, ರಾಜೇಂದ್ರ ಹರಕುಣಿ, ಆರ್.ಎಸ್.ಮುತಾಲಿಕ, ರಮೇಶ ದೇಶಪಾಂಡೆ, ರಾಜಶೇಖರ ಡೋಣಿ, ಸಚಿನ ಕಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net