ಹುಕ್ಕೇರಿ: ಹೂವಿನಕೇರಿ ಎಂದು ಹೆಸರಾಗಿದ್ದ ಜೋಡು ಗುಮ್ಮಟಗಳು ಅಸ್ಮಿತೆಯಾಗಿವೆ. 15ನೇ ಶತಮಾನದಲ್ಲಿ ವಿಜಯಪುರ ಆದಿಲ್‌ಶಾಹಿಗಳಿಂದ ನಿರ್ಮಾಣವಾದ ಇವುಗಳ ರಿಪೇರಿ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.
ಪಟ್ಟಣದ ಜೋಡು ಗುಮ್ಮಟಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು. ಗುಮ್ಮಟಗಳು ಬಳಕೆ ಮಾಡದೇ ಇರುವುದರಿಂದ ಹಾಳಾಗುತ್ತಿವೆ. ಆದ್ದರಿಂದ ಗುಮ್ಮಟಗಳ ಪ್ರಾಂಗಣದಲ್ಲಿ ವಿದ್ಯುತ್ ದೀಪ ಅಳವಡಿಸಿ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಐತಿಹಾಸಿಕ ಸ್ಮಾರಕಗಳನ್ನು ರಕ್ಷಿಸುವ ಕಾರ್ಯ ಮಾಡಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಪರಗೌಡ ಪಾಟೀಲ, ಮುಖಂಡರಾದ ಚೆನ್ನಪ್ಪ ಗಜಬರ, ವಿರೂಪಾಕ್ಷಿ ರಾಚನ್ನವರ, ರಮೇಶ ಹುಂಜಿ, ಆಲಂ ಮಕಾನದಾರ್, ಲಾಜಮ್ ನಾಯಿಕವಾಡಿ, ಅಬ್ದುಲ್ ಮುನ್ಾ ಅತ್ತಾರ ಇತರರಿದ್ದರು.