ಪುಸ್ತಕ ಓದುವ ಹವ್ಯಾಸ ಅಗತ್ಯ

ತಲ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ  ಗಣ್ಯರು ಪುಷ್ಪನಮನ ಸಲ್ಲಿಸಿದರು. ನೀಲಕಂಠ ಮಲಕನ್ನವರ, ನೀಲಕಂಠ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ಇತರರಿದ್ದರು.
ತಲ್ಲೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ನೀಲಕಂಠ ಮಲಕನ್ನವರ, ನೀಲಕಂಠ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ಇತರರಿದ್ದರು.
Published on
ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯರಗಟ್ಟಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಯರಗಟ್ಟಿ ತಾಲೂಕು ಗಾತ್ರದಲ್ಲಿ ಕಿರಿದಾದರೂ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಮಹತ್ವದ ಇತಿಹಾಸ, ಪರಂಪರೆ ಹೊಂದಿದೆ. ಈ ನಾಡಿನ ಅಸ್ಮಿತೆ ಉಳಿಸಿ, ಬೆಳೆಸುವ ಕೆಲಸ ಯುವಜನಾಂಗ ಮಾಡಬೇಕು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ಕನ್ನಡ ನಾಡು ನುಡಿ ಶ್ರೀಮಂತಿಕೆಗೆ ಅನೇಕರು ಶ್ರಮಿಸಿದ್ದಾರೆ. ಕನ್ನಡ ಭಾಷೆ, ನಾಡು ಹಾಗೂ ನುಡಿ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು ಎಂದು ಸಲಹೆ ನೀಡಿದರು.
ದೇಸಗತಿ ಮನೆತನದ ವಿಕ್ರಮಕುಮಾರ ದೇಸಾಯಿ ಅವರು, ಡಾ.ರಾಜಶೇಖರ ಬಿರಾದಾರ ಅವರ ‘ಯರಗಟ್ಟಿ ಕಾವ್ಯ ಕುಸುಮ’ ಹಾಗೂ ಆರ್.ಎಸ್.ಕಲ್ಲಣ್ಣವರ ಅವರ ‘ಮಕರಂದ’ ಕೃತಿ ಲೋಕಾರ್ಪಣೆಗೊಳಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಮಾಡಲಾಯಿತು.
ಮುರಗೋಡದ ನೀಲಕಂಠ ಸ್ವಾಮೀಜಿ, ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ, ಕಸಾಪ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮಣ್ಣವರ, ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಬಿಇಒ ಎ.ಎ.ಖಾಜಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪಿಡಿಒ ರಾಘವೇಂದ್ರ ಎಸ್.ಪಿ., ರಾಜೇಂದ್ರ ವಾಲಿ, ಮಾಜಿ ಸೈನಿಕ ಬಸಪ್ಪ ಅಂಗಡಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಬಾಬುಗೌಡ ಅಣ್ಣಿಗೇರಿ, ಮುಖಂಡ ಶಂಕರಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಬಸವರಾಜ ಪೂಜೇರ,
ಎಂ.ವಿ.ಉಪ್ಪಿನ, ಮೋಹನ ಹಾದಿಮನಿ, ಆರ್.ಎಲ್.ಜೂಗನವರ, ಈರಣ್ಣ್ಣ ಹುದ್ದಾರ, ಎಸ್.ಎಸ್.ಕುರುಬಗಟ್ಟಿಮಠ, ಭಾಸ್ಕರ ಹಿರೇಮೆತ್ರಿ, ಎ.ವಿ.ಇಂಗಳೆ, ಬಂಗಾರೆಪ್ಪ ಹರಳಿ, ಮುದಕಪ್ಪ ದಳವಾಯಿ, ಮಹಾಂತೇಶ ಗೋಡಿ, ಪರ್ವತಗೌಡ ಪಾಟೀಲ ಇತರರಿದ್ದರು. ಬಸನಗೌಡ ಅಣ್ಣಿಗೇರಿ, ವಿಜಯಲಕ್ಷ್ಮೀ ನಿಂಗದಳ್ಳಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net