ಬೆಳಗಾವಿ ತಾಲೂಕಿನ ವಾವಾಡೆ&ಸಾವಗಾಂವ ಗ್ರಾಮದಲ್ಲಿ ಪಂಢರಪುರಕ್ಕೆ ತೆರಳುವ ವಾರಕರಿ ಭಕ್ತರ ಪಾದಯಾತ್ರೆ ಅಂಗವಾಗಿ ಾನೋಬಾತುಕಾರಾಂ ಪಾಯಿ ದಿಂಡಿ ಸೋಳಾಹ ಹಾಗೂ ಭವ್ಯ ಪಲ್ಲಕಿ ಉತ್ಸವಕ್ಕೆ ಲಕ್ಷಿ$್ಮ ಹೆಬ್ಬಾಳ್ಕರ್ ಚಾಲನೆ ನೀಡಿದರು. ಜನಪ್ರತಿನಿಧಿಗಳು, ಪದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಇದ್ದರು.
ಬೆಳಗಾವಿ: ವಾರಕರಿ ಸಂಪ್ರದಾಯವು ಭಕ್ತಿ, ಶಿಸ್ತು, ಸಮಾನತೆ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಶ್ರೇಷ್ಠ ಪರಂಪರೆಯಾಗಿದೆ. ಾನೇಶ್ವರ ಮಹಾರಾಜರು ಮತ್ತು ಸಂತ ತುಕಾರಾಂ ಮಹಾರಾಜರ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಮಾಜಿ ಸಚಿವೆ ಹಾಗೂ ಶಾಸಕಿ ಲಕ್ಷಿ$್ಮ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.
ತಾಲೂಕಿನ ವಾವಾಡೆ ಸಾವಗಾಂವ ವ್ಯಾಪ್ತಿಯ ಜಯ ರಾಮಕೃಷ್ಣ ಹರಿ ಸಾಂಪ್ರದಾಯಿಕ ವಾರಕರಿ ಸೇವಾ ಸಂ' ವತಿಯಿಂದ ಆಯೋಜಿಸಲಾಗಿರುವ ಆಷಾಢ ಏಕಾದಶಿ ಅಂಗವಾಗಿ ಪಂಢರಪುರಕ್ಕೆ ತೆರಳುವ ವಾರಕರಿ ಭಕ್ತರ ಸಂಪ್ರದಾಯಿಕ ಪಾದಯಾತ್ರೆಯ ಅಂಗವಾಗಿ ಾನೋಬಾತುಕಾರಾಂ ಪಾಯಿ ದಿಂಡಿ ಸೋಳಾಹ ಹಾಗೂ ಭವ್ಯ ಪಾಲಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಆಧ್ಯಾತ್ಮಿಕ ಪಾದಯಾತ್ರೆಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭಕ್ತಿಭಾವವನ್ನು ಬಲಪಡಿಸುತ್ತವೆ ಎಂದರು.
ಭುಜಂಗ ಮಹಾರಾಜ ಪಾಟೀಲ ಸಾನ್ನಿಧ್ಯದಲ್ಲಿ, ನೂರಾರು ವಾರಕರಿ ಭಕ್ತರು, ಕೀರ್ತನಕಾರರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಧಾರ್ಮಿಕ ವಿಧಿಗಳೊಂದಿಗೆ ಕಾರ್ಯಕ್ರಮ ನೆರವೇರಿತು. ಜನಪ್ರತಿನಿಧಿಗಳು, ಪದ ಮುಖಂಡರು, ಕಾರ್ಯಕರ್ತರು ಹಾಗೂ ಭಕ್ತರು ಇದ್ದರು.