ಮಲ್ಲಮ್ಮನ ಬೆಳವಡಿ: ಗ್ರಾಮದ ವೀರಭದ್ರೇಶ್ವರ ಜಾತ್ರೆ ಅಂಗವಾಗಿ ಶನಿವಾರ ಚಿಕ್ಕ ರಥೋತ್ಸವ ಕಾರ್ಯಕ್ರಮಕ್ಕೆ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು..ಬಳಿಕ ಮಾತನಾಡಿದ ಅವರು, ದಿನ ನಿತ್ಯದ ಪುರಾಣ ಪ್ರವಚನ ಮನುಷ್ಯರನ್ನು ಸತ್ಸಂಗದೆಡೆಗೆ ಒಯ್ಯುತ್ತವೆ ಎಂದರು..ನಾರಾಯಣ ಶಾಸಿ, ರಾಚಯ್ಯಸ್ವಾಮಿ ರೊಟ್ಟಯ್ಯನವರ, ನಿವತ್ತ ಪ್ರಾಚಾರ್ಯ ಮ.ಮ.ಕಾಡೇಶನವರ ಮಾತನಾಡಿದರು..ಈ ಸಂದರ್ಭದಲ್ಲಿ ಪ್ರಸಾದ ಸೇವೆ. ಟೀ ಶರ್ಟ್, ಸ್ಮರಣಿಕೆ, ಗ್ಯಾಸ್ ಏಜೆನ್ಸಿ ವಿತರಕರಿಂದ ಸಿಲಿಂಡರ್ ಸೇವೆ ನೀಡಿದವರನ್ನು ಸನ್ಮಾನಿಸಲಾಯಿತು. .ಶಿವಮಹಾಂತ ಶಿವಾಚಾರ್ಯ ಸ್ವಾಮೀಜಿ, ಮಹಾಂತೇಶ ಉಪ್ಪಿನ, ಮಲ್ಲಸರ್ಜಗೌಡ ಪಾಟೀಲ, ಬಸವರಾಜ ಬಳಿಗಾರ, ರಮೇಶ ರಾಯೇಜಿ, ಶಂಕರಗೌಡ ಪಾಟೀಲ, ಮಂಜುನಾಥ ದೇಗಾವಿ, ರುದ್ರೇಶ ಹೂಗಾರ, ಜೀವನ ಕಮ್ಮಾರ ಇತರರಿದ್ದರು. ಕುಮಾರ ಮಂಗಳಗಟ್ಟಿ ನಿರೂಪಿಸಿದರು.